alex Certify ಗಮನಿಸಿ : ತಾತ್ಕಾಲಿಕ ಸ್ಥಿರಾಸ್ತಿಗಳ ಪರಿಷ್ಕೃತ ದರಗಳ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ತಾತ್ಕಾಲಿಕ ಸ್ಥಿರಾಸ್ತಿಗಳ ಪರಿಷ್ಕೃತ ದರಗಳ ಮಾರ್ಗಸೂಚಿ ಪ್ರಕಟ

ಬೆಂಗಳೂರು ನಗರ ಜಿಲ್ಲೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ಪರಷ್ಕರಿಸಿ ತಾತ್ಕಾಲಿಕ ಅಧಿಸೂಚನೆಯ ಪಟ್ಟಿಯನ್ನು ದಿನಾಂಕ: 06-09-2023ರಂದು ಸರ್ಕಾರವು ಅನುಮೋದಿಸಿದ್ದು ದಿನಾಂಕ 08-09-2023ರಂದು ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗುವುದು ಎಂದು ನೋಂದಣಿ ಉಪ ಮಹಾಪರಿವೀಕ್ಷಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು 5 ವರ್ಷಗಳ ಅವಧಿಯಲ್ಲಿ ಪರಿಷ್ಕರಿಸದೇ ಇರುವುದರಿಂದ ಹಾಗೂ ಸಾಕಷ್ಟು ಭೌತಿಕ ಅಭಿವೃದ್ಧಿ ಹಾಗೂ ಬೆಳವಣೆಗಗಳು ಆಗಿರುವುದರಿಂದ ಎಲ್ಲಾ ನ್ಯೂನ್ಯತೆಗಳನ್ನು ಪ್ರಸ್ತಕ ಸಾಲಿನಲ್ಲಿ ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ಪರಷ್ಕರಿಸಿ ತಾತ್ಕಾಲಿಕ ಅಧಿಸೂಚನೆಯ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
ತಾತ್ಕಾಲಿಕ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಜಿಲ್ಲಾ ನೋಂದಣಿ ಕಛೇರಿ, ಉಪ ನೋಂದಣಿ ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಪ್ರಾದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ತಹಶೀಲ್ದಾರ್ ಕಛೇರಿಗಳಲ್ಲಿ ಹಾಗೂ ಇಲಾಖೆಯ ಜಾಲತಾಣದ ವಿಳಾಸ https://igr.karnataka.gov.in ರಲ್ಲಿ ಸಾರ್ವಜನಿಕ ಮಾಹಿತಿಗಾಗಿ ಲಭ್ಯವಿದೆ.

ಈ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿವಸಗಳೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಕೇಂದ್ರ ಮೌಲ್ಯಮಾಪನ ಸಮಿತಿ ಹಾಗೂ ನೋಂದಣಿ ಉಪ ಮಹಾವೀಕ್ಷಕರು, ಕೇಂದ್ರ ಮೌಲ್ಯ ಮಾಪನ ಸಮಿತಿ ಇವರಿಗೆ ಸದಸ್ಯ ಕಾರ್ಯದರ್ಶಿಗಳು, ಕೇಂದ್ರ ಮೌಲ್ಯಮಾಪನ ಸಮಿತಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಕಛೇರಿ, ಕಂದಾಯ ಭವನ, 8ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು ಇಲ್ಲಿಗೆ ಅಂಚೆ ಮೂಲಕವಾಗಲೀ, ಖುದ್ದಾಗಿ ಅಥವಾ ಇ-ಮೇಲ್ IDcvcobjectionstonotifications@karnataka.gov.in ರ ಮುಖಾಂತರ ಕಳುಹಿಸಬಹುದು. ಪ್ರಕಟಿಸಿದ ದಿನಾಂಕದಿಂದ 15 ದಿವಸಗಳ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನೋಂದಣಿ ಉಪ ಮಹಾಪರಿವೀಕ್ಷಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...