ಬೆಂಗಳೂರು: ರಾಜ್ಯಾದ್ಯಂತ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ರಾಜ್ಯದಾದ್ಯಂತ ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ವ್ಯಾಪಕವಾಗಿ ಅನಧಿಕೃತ ಬಡಾವಣೆಗಳ ನಿವೇಶನಗಳು, ಮನೆಗಳು, ನೋಂದಣಿ ಆಗುತ್ತಿವೆ. ಮೊದಲು ಇವುಗಳಿಗೆ ಕೇವಲ ಕಾಗದ ಪತ್ರ ಇದ್ದರೂ ನೋಂದಣಿ ಮಾಡಲಾಗುತ್ತಿತ್ತು. ಹೊಸ ತಿದ್ದುಪಡಿ ಕಾಯ್ದೆ ಅನ್ವಯ ಇ-ಖಾತಾ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇ- ಖಾತಾ ಇದ್ದರಷ್ಟೇ ಆಸ್ತಿಗಳ ನೋಂದಣಿಯಾಗಲಿದೆ. ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಬಿ-ಖಾತಾ ವಿತರಿಸುವ ಪದ್ಧತಿಯನ್ನು ರಾಜ್ಯದ ಉಳಿದ ಕಡೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.