alex Certify ರಾಜ್ಯದ ಎಲ್ಲಾ 8 ಸಾವಿರಕ್ಕೂ ಅಧಿಕ ಗ್ರಾಮಲೆಕ್ಕಿಗರಿಗೆ ಲ್ಯಾಪ್ಟಾಪ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಎಲ್ಲಾ 8 ಸಾವಿರಕ್ಕೂ ಅಧಿಕ ಗ್ರಾಮಲೆಕ್ಕಿಗರಿಗೆ ಲ್ಯಾಪ್ಟಾಪ್ ವಿತರಣೆ

ಬೆಂಗಳೂರು: ಗ್ರಾಮಲೆಕ್ಕಿಗರಿಗೆ ಲ್ಯಾಪ್ಟಾಪ್ ಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ತಹಶೀಲ್ದಾರ್ ಕಚೇರಿಗಳಿಂದ ಟಪಾಲು ಪಡೆಯುವುದು ಮತ್ತು ನೀಡುವ ಕಾರ್ಯಗಳು ಗ್ರಾಮಲೆಕ್ಕಿಗರಿಗೆ ಹೊರೆ ಆಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ 8 ಸಾವಿರಕ್ಕೂ ಅಧಿಕ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ಟಾಪ್, ಇಂಟರ್ನೆಟ್ ಸಂಪರ್ಕ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಕ್ರಮದಿಂದ ತಹಶೀಲ್ದಾರ್ ಗೆ ವರದಿ ಕಳಿಸುವುದು, ಟಪಾಲುಗಳ ಸ್ವೀಕಾರ ಮತ್ತು ಕಳುಹಿಸುವ ಕಾರ್ಯವನ್ನು ಆನ್ಲೈನ್ ನಲ್ಲಿ ಮಾಡಲಾಗುವುದು. ಈ ಮೂಲಕ ಗ್ರಾಮ ಲೆಕ್ಕಿಗರ ಕಾರ್ಯ ಸುಲಭವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...