ಬೆಂಗಳೂರು: ರಾಜ್ಯದಲ್ಲಿ ಪೋಡಿ ಅಭಿಯಾನಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಿದ್ದತೆ ಕೈಗೊಂಡಿದೆ.
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಚರ್ಚೆ ನಡೆಸಿದ್ದಾರೆ. ಸರ್ವೇ ಸಂಬಂಧ ರೈತರು ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪೋಡಿ ಅಭಿಯಾನಕ್ಕೆ ಮರು ಚಾಲನೆ ನೀಡಲಾಗುವುದು.
ರಾಜ್ಯದಾದ್ಯಂತ ರೀ ಸರ್ವೇ ನಡೆಸುವ ಹಾಗೂ ಪೋಡಿ ಅಭಿಯಾನಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಿದ್ಧತೆ ಕೈಗೊಂಡಿದ್ದು, ಸಚಿವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮಕೈಮೈಗೊಳ್ಳಲು ಸೂಚನೆ ನೀಡಿದ್ದಾರೆ.