alex Certify BIG NEWS: ಸ್ಥಿರಾಸ್ತಿ ನೋಂದಣಿಗೆ ಇ- ಖಾತೆ ಕಡ್ಡಾಯ ಅವಧಿ ವಿಸ್ತರಣೆ: ಕಂದಾಯ ಇಲಾಖೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ಥಿರಾಸ್ತಿ ನೋಂದಣಿಗೆ ಇ- ಖಾತೆ ಕಡ್ಡಾಯ ಅವಧಿ ವಿಸ್ತರಣೆ: ಕಂದಾಯ ಇಲಾಖೆ ಆದೇಶ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ನೋಂದಣಿಗೆ ಇ- ಆಸ್ತಿ ತಂತ್ರಾಂಶದಲ್ಲಿ ಪಡೆದ ಇ- ಖಾತೆ ಕಡ್ಡಾಯ ನಿಯಮ ಅನುಷ್ಠಾನ ದಿನಾಂಕವನ್ನು ಕಂದಾಯ ಇಲಾಖೆ ವಿಸ್ತರಣೆ ಮಾಡಿ ಆದೇಶಿಸಿದೆ. ಅ. 28 ರವರೆಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎನ್ನಲಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಸುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸ್ಥಿರಾಸ್ತಿ ನೋಂದಣಿಗೆ ಇ- ಅಸ್ತಿ ತಂತ್ರಾಂಶದಲ್ಲಿ ಪಡೆದ ಇ ಖಾತಾ ಮಾಹಿತಿಯನ್ನು ಪಡೆದು ದಸ್ತಾವೇಜು ನೋಂದಣಿ ಮಾಡುವಂತೆ ತಿಳಿಸಲಾಗಿದೆ. ಯಾವುದೇ ಭೌತಿಕ ಖಾತಾ ದಾಖಲೆ ಪತ್ರಗಳನ್ನು ಪಡೆಯದಂತೆ ಆದೇಶಿಸಲಾಗಿದೆ.

ಈಗಾಗಲೇ ಇ-ಆಸ್ತಿ ತಂತ್ರಾಂಶದೊಂದಿಗೆ ಕಾವೇರಿ 2.0 ಸಾಫ್ಟ್ವೇರ್ ಸಂಯೋಜನೆ ಮಾಡಲಾಗಿದೆ. ಆದ್ದರಿಂದ ಸ್ಥಿರಾಸ್ತಿ ನೋಂದಣಿ ಸಮಯದಲ್ಲಿ ಇ- ಆಸ್ತಿ ಸಾಫ್ಟ್ವೇರ್ ನಿಂದ ಮಾಹಿತಿ ಪಡೆದು ನೋಂದಣಿ ಮಾಡಬೇಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇ- ಖಾತೆ ಕಡ್ಡಾಯ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...