ಶನಿ ದೇವನ ಚಲನೆ ಮೇಲೆ ಪ್ರತಿಯೊಬ್ಬರು ನಿಗಾ ಇಡ್ತಾರೆ. ಯಾಕೆಂದ್ರೆ ಶನಿಯ ವಕ್ರದೃಷ್ಟಿ ಬೀರಿದ್ರೆ ಅದ್ರಿಂದ ಬಚಾವ್ ಆಗೋದು ಕಷ್ಟ. ಸದ್ಯ ಶನಿ ಹಿಮ್ಮುಖದಲ್ಲಿ ಚಲಿಸುತ್ತಿದ್ದಾನೆ. ಜೂನ್ 5 ರಂದು ಶನಿ, ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದ. ಅಕ್ಟೋಬರ್ 23ರಂದು ಶನಿ ಸರಿಯಾದ ಸ್ಥಿತಿಗೆ ಬರಲಿದ್ದಾರೆ. ಜ್ಯೋತಿಷ್ಯದ ಪ್ರಕಾರ, ಗ್ರಹವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ ಅದರ ಮಂಗಳಕರ ಪರಿಣಾಮವು ಕಡಿಮೆಯಿರುತ್ತದೆ. ಪಥ ಸ್ಥಿತಿಗೆ ಬಂದಾಗ ಕೆಲ ರಾಶಿಯವರಿಗೆ ಒಳ್ಳೆಯ ಫಲ ಪ್ರಾಪ್ತಿಯಾಗಲಿದೆ.
ಸದ್ಯ ಶನಿ ಮಕರ ರಾಶಿಯಲ್ಲಿದ್ದು, ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ಧೈಯ ನಡೆಯುತ್ತಿದೆ. ಕುಂಭ, ಧನು ಮತ್ತು ಮಕರ ರಾಶಿಯ ಜನರ ಮೇಲೆ ಶನಿಯ ಪ್ರಭಾವ ಈಗಿದೆ. ಅಕ್ಟೋಬರ್ 23 ರಂದು ಶನಿ ಸರಿಯಾಗಿ ಸಾಗಲಿದ್ದು, ಜನವರಿ 17ರಂದು ಕುಂಭ ರಾಶಿ ಪ್ರವೇಶ ಮಾಡಲಿದ್ದಾನೆ.
ಶನಿ ಸರಿಯಾದ ದಾರಿಯಲ್ಲಿ ಚಲಿಸಲು ಶುರು ಮಾಡ್ತಿದ್ದಂತೆ ಮಿಥುನ ಮತ್ತು ತುಲಾ ರಾಶಿಯವರ ಶನಿ ಧೈಯ ಮುಗಿಯಲಿದೆ. ಇದಲ್ಲದೆ ಕೆಲ ರಾಶಿಯವರಿಗೆ ಲಾಭ ಸಿಗಲಿದೆ. ವೃಷಭ, ಕನ್ಯಾ, ಧನು ರಾಶಿಯವರಿಗೆ ಪಥ ಮಂಗಳವಾಗಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಎಲ್ಲ ಮೂಲೆಗಳಿಂದ ಹಣ ಪ್ರಾಪ್ತಿಯಾಗಲಿದೆ. ಆರೋಗ್ಯದಲ್ಲೂ ಶನಿಯ ಸುಧಾರಣೆಯಾಗಲಿದೆ. ಪ್ರಯಾಣದ ಸಾಧ್ಯತೆ ಹೆಚ್ಚಿರುತ್ತದೆ.