ನಿವೃತ್ತಿ ನಂತರ ಮುಂದೇನು ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಯುವಕರು ಪಿಂಚಣಿ ಯೋಜನೆಗಳಲ್ಲಿ ಹಣ ಹೂಡುತ್ತಿದ್ದಾರೆ. ದಿನ ದಿನಕ್ಕೂ ವಸ್ತುಗಳ ಬೆಲೆ ಏರುತ್ತಿರುವ ಕಾರಣ ಈಗಿನ ಲೆಕ್ಕಾಚಾರದಲ್ಲಿ ನಿವೃತ್ತಿಗೆ ಹಣ ಹೂಡಿಕೆ ಮಾಡಿದ್ರೆ ಜೀವನ ಕಷ್ಟ. ಹತ್ತು ವರ್ಷದಲ್ಲಿಯೇ ಕೂಡಿಟ್ಟ ಹಣ ಖಾಲಿಯಾಗುವ ಸಾಧ್ಯತೆ ಇದೆ. ಹೀಗಂತ ನಾವು ಹೇಳ್ತಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಯುವಕರು ಹೇಳಿದ್ದಾರೆ. ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಯುವಕರು ನಿವೃತ್ತಿ ಉಳಿತಾಯದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
ನಿಮಗೂ ಈ ಚಿಂತೆ ಇದ್ರೆ ಇನ್ಮುಂದೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಂಪನಿ ಹೇಳಿದೆ. ಸಮೀಕ್ಷೆ ಆಧಾರದ ಮೇಲೆ ಜನರಿಗೆ ಅನುಕೂಲವಾಗುವ ಯೋಜನೆಯೊಂದನ್ನು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಶುರು ಮಾಡಿದೆ. ಕಂಪನಿ ಈಗ ಸ್ವಾಗ್ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಯುವಕರು ಭವಿಷ್ಯದ ಬಗ್ಗೆ ಚಿಂತೆ ಮಾಡ್ಬೇಕಾಗಿಲ್ಲ. ಅವರು ಜೀವಿತಾವಧಿಯವರೆಗೂ ಪಿಂಚಣಿ ಪಡೆಯುವುದ್ರಿಂದ ಅವರ ಹಾಗೂ ಅವರ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ. ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜನೆಯಲ್ಲಿ ಬದಲಾವಣೆ ಕೂಡ ಮಾಡಬಹುದು.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯ ಸ್ವಾಗ್ ಪಿಂಚಣಿ ಯೋಜನೆ, ಗ್ರಾಹಕರಿಗೆ ಹೊಣೆಯಾಗುವುದಿಲ್ಲ. ಆರಾಮದಾಯಕವಾಗಿ ಗ್ರಾಹಕರು ಇದ್ರಲ್ಲಿ ಹೂಡಿಕೆ ಮಾಡಬಹುದು. ಅಲ್ಲದೆ ಇದು ಸಂಪೂರ್ಣ ಸುರಕ್ಷಿತವಾಗಿದೆ. ಅಗತ್ಯಕ್ಕೆ ತಕ್ಕಂತೆ ನೀವು ಮಾಶಾಸನ ಆಯ್ಕೆ ಮಾಡಬಹುದು. ನಿಮ್ಮ ಎಪ್ಪತ್ತು ವರ್ಷದ ಮೇಲೆ ನಿಮಗೆ ಪಿಂಚಣಿ ಸಿಗುತ್ತದೆ. ನೀವು ಸಾವನ್ನಪ್ಪಿದಲ್ಲಿ ನಿಮ್ಮ ನಾಮಿನಿಗೆ ಪಾಲಿಸಿಯ ಕೆಲ ಭಾಗವನ್ನು ನೀಡಲಾಗುತ್ತದೆ.