ಬೆಂಗಳೂರು : ನನ್ನ ಮೇಲಿರುವ ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆಶಿ ‘ ನಾನು 10:15 % ಕಮಿಷನ್ ಪಡೆದಿದ್ದರೆ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬಸವರಾಜ ಬೊಮ್ಮಾಯಿ, ಅಶೋಕ್ ನಿವೃತ್ತಿ ಪಡೆಯುತ್ತಾರಾ ಎಂದು ಸವಾಲ್ ಹಾಕಿದರು. ಡಿಸಿಎಂ ಡಿಕೆಶಿ ವಿರುದ್ಧ ಬಿಜೆಪಿ ಕಮಿಷನ್ ಆರೋಪ ಮಾಡಿದ್ದು, ಆರೋಪಕ್ಕೆ ಡಿಸಿಎಂ ತಿರುಗೇಟು ನೀಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಮೊದಲು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಿ, ಗುತ್ತಿಗೆದಾರರು ಹಣ ಬಿಡುಗಡೆಯಾಗಿ 4 ವರ್ಷ ಕಾದಿದ್ದರು. ನನ್ನ ವಿರುದ್ಧ ಯಾರಿಗೆ ದೂರು ನೀಡುತ್ತಾರೋ ನೀಡಲಿ ಸಂತೋಷ ಎಂದು ಡಿಸಿಎಂ ಹೇಳಿದರು. ನೀರಾವರಿ ಇಲಾಖೆಗೆ 25 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ಬಿಲ್ ನೀಡಿದ್ದಾರೆ. 600 ಕೋಟಿ ರೂ. ಹಣ ಇಲಾಖೆಯಲ್ಲಿ ಇದೆ.ನಿಯಮ ಪ್ರಕಾರ ಬಿಲ್ ಪಾವತಿ ಆಗುತ್ತೆ. ಬ್ಲ್ಯಾಕ್ ಮೇಲ್ ಗಳಿಗೆಲ್ಲಾ ಡಿಕೆಶಿ ಹೆದರಲ್ಲ ಎಂದು ಡಿಕೆಶಿ ಇತ್ತೀಚೆಗೆ ತಿರುಗೇಟು ನೀಡಿದ್ದರು ಯಾರನ್ನೋ ಹೆದರಿಸಿದಂತೆ ನನ್ನನ್ನು ಹೆದರಿಸಲು ಆಗುತ್ತಾ?. ಹಾಕಲಿ ಬಿಡಿ.ನಾವು ಹಿಂದಿನ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದು ಸತ್ಯ, ಅದರ ಬಗ್ಗೆ ತನಿಖೆ ನಡೆಸಸುತ್ತೇನೆ ಎಂದರು.