alex Certify ಜೀವಂತವಾಗಿರುವಾಗಲೇ ತಮ್ಮ ಸಮಾಧಿ ಕಟ್ಟಿಸಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತವಾಗಿರುವಾಗಲೇ ತಮ್ಮ ಸಮಾಧಿ ಕಟ್ಟಿಸಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿ

ಹೈದರಾಬಾದ್: ಆಂಧ್ರ ಪ್ರದೇಶದ ನಿವೃತ್ತ ಪೊಲೀಸ್ ಆಗಿರುವ ಶೇಖ್ ಮುಜೀಬ್ ಸಾಹೇಬ್ ಎಂಬುವರು ತಮ್ಮ ತಾಯಿಯ ಸಮಾಧಿಯ ಪಕ್ಕದಲ್ಲೇ ತಮಗೂ ಸಮಾಧಿಯೊಂದನ್ನು ಕಟ್ಟಿಸಿಕೊಂಡಿದ್ದಾರೆ.

ಚಿತ್ತೂರು ಜಿಲ್ಲೆ ಪಟೂರು ಗ್ರಾಮದ ನಿವಾಸಿಯಾಗಿರುವ ಇವರು, ಭೌತಿಕ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂದು ಬಲವಾಗಿ ನಂಬಿದ್ದಾರೆ. ಪೊಲೀಸ್ ಇಲಾಖೆಯ ಸೇವೆಯಿಂದ 2010ರಲ್ಲಿ ನಿವೃತ್ತರಾಗಿರುವ ಇವರು, ತಮ್ಮ ಎರಡು ಎಕರೆ ವಿಸ್ತಾರವಾಗಿರುವ ಮಾವಿನ ತೋಪಿನ ನಡುವೆ ತನ್ನ ತಾಯಿ ಬೀಬಿ ಜಾನ್ ಮತ್ತು ಅಣ್ಣ ಎಸ್.ಎ. ಸತ್ತಾರ್ ಅವರ ಸಮಾಧಿಗಳ ಪಕ್ಕದಲ್ಲೇ ತನ್ನ ಸಮಾಧಿಯನ್ನೂ ನಿರ್ಮಿಸಿಕೊಂಡಿದ್ದಾರೆ.

BIG NEWS: PSI ನೇಮಕಾತಿ ಅಕ್ರಮ; ಸಹೋದರರಿಬ್ಬರೂ ಅಕ್ರಮದಲ್ಲಿ ಭಾಗಿ; ಅಣ್ಣ-ತಮ್ಮನ ವಿರುದ್ಧ FIR ದಾಖಲು

ತಾಯಿಯ ನಿಧನದಿಂದ ಮತ್ತು ಪೊಲೀಸ್ ಇಲಾಖೆಯಲ್ಲಿದ್ದಾಗ ತಾವು ಸಾಕ್ಷೀಕರಿಸಿದ ಹಲವು ಘಟನೆಗಳಿಂದಲೂ ಆಘಾತಕ್ಕೆ ಒಳಗಾಗಿದ್ದ ಅವರು ಎರಡು ದಶಕಗಳಷ್ಟು ಹಿಂದೆಯೇ ತಮಗೂ ಸಮಾಧಿ ಕಟ್ಟಿಸಿಕೊಂಡಿದ್ದರು. ಭೌತಿಕ ಜಗತ್ತಿನಿಂದ ತಮ್ಮನ್ನು ತಾವು ಕಳಚಿಕೊಳ್ಳುವ ಅಭ್ಯಾಸವನ್ನು ಆಗಿನಿಂದಲೇ ಆರಂಭಿಸಿದ್ದು, ತಾವು ತೀರಿಕೊಂಡಾಗ ಅಲ್ಲಿಯೇ ತಮ್ಮ ಅಂತ್ಯ ಸಂಸ್ಕಾರವನ್ನು ನಡೆಸಬೇಕೆಂದೂ ತಿಳಿಸಿದ್ದಾರೆಂದು ವರದಿಯಾಗಿದೆ. ಕಲ್ಲನ್ನು ಎತ್ತಿ ಮೃತದೇಹವನ್ನು ಸುಲಭವಾಗಿ ಅದರೊಳಗೆ ಇರಿಸುವಂತೆ ಮುಜೀಬ್ ಸಾಹೇಬ್ ಇದನ್ನು ವಿನ್ಯಾಸಗೊಳಿಸಿದ್ದಾರೆ.

ಮನುಷ್ಯನಿಗೆ ಸಾವು ಅನಿವಾರ್ಯ. ಅದಕ್ಕಾಗಿ ಅಂಜುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ಈಗ ಬದುಕಿನ ಬಹುತೇಕ ಅವಧಿಯನ್ನು ಸಮಾಧಿಯ ಬಳಿ ಧ್ಯಾನಸ್ಥ ಸ್ಥಿತಿಯಲ್ಲಿ ಕಳೆಯುತ್ತಿದ್ದೇನೆ. ನಿಸ್ವಾರ್ಥವಾಗಿ ಬದುಕುವಂತೆ, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರಿಗೆ ಸಹಾಯ ಮಾಡುವಂತೆ ಜನರಿಗೆ ಬೋಧಿಸುವ ಬರಹಗಳನ್ನು ಈ ಮಾವಿನ ತೋಪಿನ ಆವರಣ ಗೋಡೆಯ ಮೇಲೆ ಬರೆಸಿದ್ದಾರೆ. ಮಾನವೀಯ ಸಮಾಜವನ್ನು ನಿರ್ಮಿಸಲು ಎಲ್ಲರೂ ಗರಿಷ್ಠ ಪ್ರಯತ್ನ ಮಾಡಬೇಕೆಂಬುದು ಮುಜೀಬ್ ಸಾಹೇಬ್ ಅವರ ಏಕೈಕ ಆಸೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...