ಬೆಂಗಳೂರು: ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದ್ದು, ಎನ್‌ಪಿಎಸ್ ಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು 2018ರ ಏಪ್ರಿಲ್ 1ರ ಬದಲಿಗೆ 2006 ಏಪ್ರಿಲ್ 1ರಿಂದಲೇ ಪೂರ್ವನ್ವಯವಾಗುವಂತೆ ಆದೇಶಿಸಲಾಗಿದೆ.
ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ಏಪ್ರಿಲ್ 1ರ 2018 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿಸಲಾಗಿದ್ದರಿಂದ ಈ ಸೌಲಭ್ಯವನ್ನು 2006 ರಿಂದ ಮರಣ ಹೊಂದಿದ ಅಥವಾ ನಿವೃತ್ತಿ ಹೊಂದಿದ ಪ್ರಕರಣಗಳಿಗೂ ಎರಡು ಅನ್ವಯಿಸಲು 2021ರ ಆಗಸ್ಟ್ 23ರಂದು ನಡೆದ ಎನ್‌ಪಿಎಸ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಎನ್ಪಿಎಸ್ ಅಧಿಕಾರಿ ಮತ್ತು ನೌಕರರಿಗೆ ಅನ್ವಯವಾಗುತ್ತಿದ್ದ ಸೌಲಭ್ಯದ ಹಿಂದಿನ ಆದೇಶ ಮಾರ್ಪಡಿಸಿ 2006ರ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ. ಪಿಂಚಣಿ ಸೌಲಭ್ಯ ಇತ್ಯರ್ಥಪಡಿಸುವ ಕುರಿತು ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅರ್ಹ ಪಿಂಚಣಿದಾರರು ಮತ್ತು ನಾಮನಿರ್ದೇಶತ ಕುಟುಂಬ ವರ್ಗದವರು ಅಗತ್ಯ ದಾಖಲೆ ಪತ್ರಗಳನ್ನು ಡಿಡಿಒ, ಖಜಾನೆ ವಿಭಾಗಕ್ಕೆ ಸಲ್ಲಿಸಬೇಕಿದೆ ಎಂದು ಹೇಳಲಾಗಿದೆ.