ನವದೆಹಲಿ: ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮಧ್ಯಾಹ್ನದೊಳಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್ ನಲ್ಲಿ ಆಪ್, ಮಣಿಪುರದಲ್ಲಿ ಬಿಜೆಪಿ, ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಿ ಅಧಿಕಾರಕ್ಕೆ ಬರಬಹುದೆಂದು ಸಮೀಕ್ಷೆಗಳು ಹೇಳಿದ್ದು, ಗೋವಾದಲ್ಲಿ ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಕಾಂಗ್ರೆಸ್ ಫಲಿತಾಂಶಕ್ಕೂ ಮೊದಲೇ ಪ್ರಕ್ರಿಯೆ ಆರಂಭಿಸಿದೆ.
ಮಣಿಪುರ:
ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿದೆ. ಇಂಡಿಯಾ ನ್ಯೂಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ 23 -28, ಕಾಂಗ್ರೆಸ್ 10 -14 ಸ್ಥಾನ ಗಳಿಸಬಹುದು. ಇಂಡಿಯಾ ಟಿವಿ, ಗ್ರೌಂಡ್ ಝೀರೋ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 26 -31, ಕಾಂಗ್ರೆಸ್ 11 -17, ಜೀನ್ಯೂಸ್ ಡಿಸೈನ್ ಬಾಕ್ಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ 32 -38, ಕಾಂಗ್ರೆಸ್ 12 -17 ನ್ಯೂಸ್ 18, ಪಿ ಮಾರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿ 27 -31, ಕಾಂಗ್ರೆಸ್ 11 -17 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.
ಪಂಜಾಬ್:
ಪಂಜಾಬ್ ನಲ್ಲಿ ಒಟ್ಟು 117 ಸ್ಥಾನಗಳಿದ್ದು, ಬಹುಮತಕ್ಕೆ 59 ಸ್ಥಾನಗಳು ಬೇಕಿದೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರುವ ಸಂಭಾವ್ಯ ಪಕ್ಷ ಆಮ್ ಆದ್ಮಿ ಪಾರ್ಟಿ ಆಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು AAP ಅಧಿಕಾರಕ್ಕೇರಲಿದೆ ಎಂದು ತಿಳಿಸಿವೆ
ಇಟಿಜಿ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 3 -7, ಕಾಂಗ್ರೆಸ್ 27 -33, ಎಎಪಿ 70 -75 ಅಕಾಲಿದಳ 7 -13
ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಬಿಜೆಪಿ 1 -4, ಕಾಂಗ್ರೆಸ್ 19 -31, ಎಎಪಿ 76 – 90, ಅಕಾಲಿದಳ 7 -11
ನ್ಯೂಸ್ ಎಕ್ಸ್, ಪೋಲ್ ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 1 -6, ಕಾಂಗ್ರೆಸ್ 24 -29, ಎಎಪಿ 56 -61, ಅಕಾಲಿದಳ 22 -26
ರಿಪಬ್ಲಿಕ್ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ 1 -3, ಕಾಂಗ್ರೆಸ್ 23 -31, AAP 62 – 70, ಅಕಾಲಿದಳ 16 -24
ಟಿವಿ9 ಭಾರತವರ್ಷ, ಪೋಲ್ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 1 -6, ಕಾಂಗ್ರೆಸ್ 24 -29, AAP 56 -61 ಅಕಾಲಿದಳ 22 -26 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶ:
ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕಿದೆ. ಬಿಜೆಪಿ ಸುಮಾರು 240 ಕ್ಷೇತ್ರಗಳಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸಿಎನ್ಎನ್, ನ್ಯೂಸ್ 18 ಸಮೀಕ್ಷೆಯ ಪ್ರಕಾರ ಬಿಜೆಪಿ 262- 277, ಕಾಂಗ್ರೆಸ್ 3 -8, ಸಮಾಜವಾದಿಪಕ್ಷ 119 -134, ಬಿಎಸ್ಪಿ 7-15
ಇಟಿಜಿ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 230 -245, ಕಾಂಗ್ರೆಸ್ 2 -6 ಸಮಾಜವಾದಿ ಪಕ್ಷ 150 -165, ಬಿಎಸ್ಪಿ 5-10
ನ್ಯೂಸ್ ಎಕ್ಸ್, ಪೋಲ್ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 211 -245, ಕಾಂಗ್ರೆಸ್ 4 -6, ಸಮಾಜವಾದಿಪಕ್ಷ 146 -160, ಬಿಎಸ್ಪಿ 14 -24
ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಬಿಜೆಪಿ 240, ಕಾಂಗ್ರೆಸ್ 4, ಸಮಾಜವಾದಿ ಪಕ್ಷ 140, ಬಿಎಸ್ಪಿ 17
ಟವಿ 9, ಭಾರತ್ ವರ್ಷ್ ಸಮೀಕ್ಷೆ ಪ್ರಕಾರ ಬಿಜೆಪಿ 221 -225, ಕಾಂಗ್ರೆಸ್ 4-6, ಸಮಾಜವಾದಿ 146 -160, ಬಿಎಸ್ಪಿ 14 -24
ಗೋವಾ
ಟಿವಿ 9, ಭಾರತ್ ವರ್ಷ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಗೋವಾದಲ್ಲಿ –ಒಟ್ಟು ಸ್ಥಾನ 40
ಬಿಜೆಪಿ 17 -19
ಕಾಂಗ್ರೆಸ್ 11 -13
AAP 1 -2
ಇತರೆ 02 -07
ಉತ್ತರಾಖಂಡ್
ಟಿವಿ 9, ಭಾರತ್ ವರ್ಷ್ ಮತದಾನೋತ್ತರ ಸಮೀಕ್ಷೆ ಪ್ರಕಾರ, ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಉತ್ತರಾಖಂಡ್- ಒಟ್ಟು ಸ್ಥಾನ 70
ಬಿಜೆಪಿ 29 -34
ಕಾಂಗ್ರೆಸ್ 33 -38
AAP 0 -3
ಇತರೆ 02 -06