alex Certify ತೀವ್ರ ಕುತೂಹಲ ಮೂಡಿಸಿದ ಉಪಚುನಾವಣೆ ಫಲಿತಾಂಶ: 11 ಗಂಟೆಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೀವ್ರ ಕುತೂಹಲ ಮೂಡಿಸಿದ ಉಪಚುನಾವಣೆ ಫಲಿತಾಂಶ: 11 ಗಂಟೆಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆಯೊಳಗೆ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆಬೀಳಲಿದೆ.

ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳಿಗೆ ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಅಗ್ನಿಪರೀಕ್ಷೆಯಾಗಿರುವ ಉಪಚುನಾವಣೆ ಫಲಿತಾಂಶ ಮಹತ್ವದ್ದಾಗಿದೆ. ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತಷ್ಟು ಪ್ರಬಲವಾಗಿ ಹೈಕಮಾಂಡ್ ವಿಶ್ವಾಸ ಗಟ್ಟಿಯಾಗಲಿದೆ. ಕಾಂಗ್ರೆಸ್ ಜಯಗಳಿಸಿದಲ್ಲಿ ಪಕ್ಷದ ವಿಶ್ವಾಸ ವೃದ್ಧಿಯಾಗಲಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತಷ್ಟು ಪ್ರಬಲರಾಗಲಿದ್ದಾರೆ.

ಜೆಡಿಎಸ್ ಪಕ್ಷ ಗೆದ್ದಲ್ಲಿ ಅಲ್ಪಸಂಖ್ಯಾತರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಾಧಾನ್ಯತೆ ಸಿಗಲಿದೆ. ಯಾರೇ ಸೋತರೆ ಮೂರು ಪಕ್ಷಗಳಿಗೆ ಭಾರಿ ಹಿನ್ನಡೆಯಾಗಲಿದೆ.

ಇನ್ನು ವಿಜಯೋತ್ಸವ ಆಚರಣೆಗೆ ಚುನಾವಣೆ ಆಯೋಗ ಬ್ರೇಕ್ ಹಾಕಿದೆ. ಸಂಭ್ರಮಾಚರಣೆ, ಮೆರವಣಿಗೆ ನಡೆಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ. ವಿಜಯೋತ್ಸವ ಕೂಡ ಸಂಪೂರ್ಣ ನಿಷೇಧಿಸಲಾಗಿದೆ. ಚುನಾವಣಾಧಿಕಾರಿಗಳಿಗೆ ಆಯೋಗದಿಂದ ಸೂಚನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...