ನವದೆಹಲಿ: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಮಾನದಂಡದ ಶಿಫಾರಸು ಮಾಡಲಾಗಿದೆ. 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ 10 ಮತ್ತು 11 ನೇ ತರಗತಿಯ ರಿಸಲ್ಟ್ ಮತ್ತು 12 ನೇ ತರಗತಿಯ ಪ್ರಿಪರೇಟರಿ ಪರೀಕ್ಷೆ ಆಧಾರದ ಮೇಲೆ 30:30:40 ಅನುಪಾತದಲ್ಲಿ ಅಂಕ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.
10 ನೇ ತರಗತಿ ಫಲಿತಾಂಶದಲ್ಲಿ ಶೇಕಡ 30, 11 ನೇ ತರಗತಿ ಫಲಿತಾಂಶದಲ್ಲಿ ಶೇಕಡ 30 ಅಂಕ, 12 ನೇ ತರಗತಿ ಪ್ರಿಪರೇಟರಿಯ ಶೇಕಡ 40 ಅಂಕ ಫಲಿತಾಂಶದ ಮಾನದಂಡದ ಬಗ್ಗೆ ಸಮಿತಿ ಶಿಫಾರಸು ಮಾಡಿದೆ.
ಕೋವಿಡ್ ಕಾರಣದಿಂದಾಗಿ ಪರೀಕ್ಷೆ ರದ್ದಾಗಿ ಸಿಬಿಎಸ್ಇ ವತಿಯಿಂದ ಫಲಿತಾಂಶ ಪ್ರಕಟಿಸಲು ವಸ್ತುನಿಷ್ಠ ಮಾನದಂಡ ಸಿದ್ಧಪಡಿಸಲು 13 ಸದಸ್ಯರ ಸಮಿತಿ ನೇಮಿಸಿದ್ದು, ಈ ಸಮಿತಿ 30:30:40 ಆಧಾರದ ಮೇಲೆ ಫಲಿತಾಂಶಕ್ಕೆ ಶಿಫಾರಸು ಮಾಡಿದೆ.