ಒಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇನ್ನೊಂದು ಕಡೆ ಜನರು ಯಾವ ಭಯವಿಲ್ಲದೆ ಓಡಾಡ್ತಿದ್ದಾರೆ. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದ್ರ ಮಧ್ಯೆಯೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್ 15 ರಿಂದ ಮಾಲ್‌ಗಳು, ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಿದೆ.
ಕೋವಿಡ್ -19 ಲಾಕ್‌ಡೌನ್ ಸಡಿಲಗೊಳಿಸಲಾಗ್ತಿದೆ. ಹೊಸ ಆದೇಶದ ಪ್ರಕಾರ, ಮಾಲ್‌ಗಳು, ರೆಸ್ಟೋರೆಂಟ್‌ಗಳು ರಾತ್ರಿ 10 ಗಂಟೆಯವರೆಗೆ ಶೇಕಡಾ 50ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ ನೀಡಲಾಗಿದೆ. ಸ್ಪಾ ಮತ್ತು ಜಿಮ್ ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ ಸರ್ಕಾರ ಷರತ್ತು ವಿಧಿಸಿದೆ. ಎಲ್ಲ ಸಿಬ್ಬಂದಿ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಹಾಗೆ ಎಲ್ಲ ಅಂಗಡಿಗಳು ರಾತ್ರಿ 10 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ.
ಒಳಾಂಗಣ ಆಟಗಳಿಗೆ ಅನುಮತಿ ನೀಡಲಾಗಿದೆ. ಆದ್ರೆ ಸಿನಿಮಾ ಹಾಲ್ ಹಾಗೂ ಧಾರ್ಮಿಕ ಸ್ಥಳಗಳ ಬಾಗಿಲುಗಳನ್ನು ಮುಂದಿನ ಆದೇಶದವರೆಗೆ ತೆಗೆಯದಿರಲು ನಿರ್ಧರಿಸಲಾಗಿದೆ. ತೆರೆದ ಸ್ಥಳಗಳಲ್ಲಿ ನಡೆಯುವ ಮದುವೆಗೆ 200 ಜನರು ಬರಬಹುದಾಗಿದೆ. ಆದ್ರೆ ಆಗಸ್ಟ್ 17ರಂದು ಶಾಲೆ-ಕಾಲೇಜು ತೆರೆಯುವ ನಿರ್ಧಾರ ತೆಗೆದುಕೊಂಡಿಲ್ಲವೆಂದು ಸರ್ಕಾರ ಹೇಳಿದೆ.