ರೆಸ್ಟೋರೆಂಟ್ ವೊಂದು ಉದ್ಯೋಗಿಗೆ ವೇತನ ಕೊಡದೆ ಸತಾಯಿಸುತ್ತಿತ್ತು. ಮಾಲೀಕರ ಬಳಿ ದುಂಬಾಲು ಬಿದ್ದು ಕೆಲವು ವಾರದ ಬಳಿಕ ಕೊನೆಗೂ ಉದ್ಯೋಗಿಗೆ ವೇತನವೇನೋ ಸಿಕ್ಕಿತು. ಆದರೆ ಅದನ್ನು ನೋಡಿ ಆತ ದಿಗ್ಭ್ರಾಂತಗೊಂಡಿದ್ದಾನೆ.
ಐರ್ಲೆಂಡ್‌ನ ಡಬ್ಲಿನ್ ರೆಸ್ಟೋರೆಂಟ್ ಉದ್ಯೋಗಿ ತನ್ನ ವೇತನವನ್ನು ಪದೇ ಪದೇ ಕೇಳಿದ ನಂತರ ಕೊನೆಯ ವೇತನವನ್ನು ಕೊಟ್ಟಿದೆ. ನೋಟಿನ ಬದಲು ನಾಣ್ಯಗಳನ್ನು ಬಕೆಟ್ ನಲ್ಲಿ ತುಂಬಿ ಕೊಟ್ಟಿದೆ. ಇದರಿಂದ ಆಘಾತಕ್ಕೊಳಗಾದ ಉದ್ಯೋಗಿಯು ಫೋಟೋ ಸಹಿತ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನ ಕೊನೆಯ ವೇತನವನ್ನು ವಾರಗಟ್ಟಲೆ ಬೆನ್ನಟ್ಟಿದ ನಂತರ ನಾನು ಅಂತಿಮವಾಗಿ ಇದನ್ನು ಪಡೆದುಕೊಂಡೆ” ಅಂತಾ ಬರೆದಿದ್ದಾರೆ.
ಮನಕಲಕುತ್ತೆ ಕೋವಿಡ್ ಸೋಂಕಿತ ಆರೋಗ್ಯ ಕಾರ್ಯಕರ್ತೆ ಹೇಳಿದ ಆ ಕೊನೆಯ ಮಾತು……!
ಇನ್ನೊಂದು ಚಿತ್ರದಲ್ಲಿ, ಅವರು ಬಕೆಟ್ 29.8 ಕಿಲೋಗ್ರಾಂಗಳಷ್ಟು ತೂಕವಿರುವುದಾಗಿ ಹೇಳಿದ್ದಾರೆ. ಅಲ್ಲದೆ ಕಿಯೋಘ್, ರೆಸ್ಟೋರೆಂಟ್ ಮಾಲೀಕರು ಮಾಡಿದ್ದ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಸಿಬ್ಬಂದಿ ಮೇಲೆ ರೆಸ್ಟೋರೆಂಟ್ ಮಾಲೀಕರು ತೋರಿರುವ ದುರ್ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.