ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಶ್ರೀಲಂಕಾ ಅನಿಲದ ಕೊರತೆ ಎದುರಿಸುತ್ತಿರುವ ಕಾರಣ ಕೊಲಂಬೊದಲ್ಲಿನ ರೆಸ್ಟೋರೆಂಟ್ ಮಾಲೀಕರು ಆಹಾರ ಬೇಯಿಸಲು ಸೌದೆ ಬಳಸತೊಡಗಿದ್ದಾರೆ.
ನಮ್ಮಲ್ಲಿ ಗ್ಯಾಸ್ ಇಲ್ಲ. ಹಾಗಾಗಿ ಕಟ್ಟಿಗೆಯಲ್ಲಿ ಅಡುಗೆ ಮಾಡುತ್ತಿದ್ದೇವೆ. ಗ್ಯಾಸ್ ಬರುತ್ತದೆ ಎಂದು ಹೇಳಿ 15 ದಿನವಾಗಿದೆ. ಮೊದಲು 400 ಆಹಾರ ಪದಾರ್ಥಗಳಿದ್ದ ನಮ್ಮ ಮೆನು ಈಗ 100ಕ್ಕೆ ಮೊಟಕುಗೊಂಡಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.
ದೇಶವು ಅನಿಲದ ಕೊರತೆ ತೀವ್ರವಾಗಿದೆ. ಗ್ಯಾಸ್ ಸಿಲಿಂಡರ್ ದರ ತುಂಬಾ ದುಬಾರಿಯಾಗುವುದರಿಂದ ಶ್ರೀಲಂಕಾದ ಜನರು ಉರುವಲಿನಿಂದ ಅಡುಗೆ ಮಾಡಲು ಮುಂದಾಗಿದ್ದಾರೆ. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ಶ್ರೀಲಂಕಾ ಔಷಧಿಗಳಿಂದ ಅನಿಲದವರೆಗೆ ಎಲ್ಲದರ ಕೊರತೆ ಎದುರಿಸುತ್ತಿದೆ. ಭೀಕರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಜನ ಅಡುಗೆ ಮಾಡಲು ಉರುವಲು ಬಳಸತೊಡಗಿದ್ದಾರೆ.