ಚೆನ್ನೈ: ಗ್ರಾಹಕರಿಗೆ ಉಪ್ಪಿನಕಾಯಿ ತಲುಪಿಸದೇ ‘ಮಾನಸಿಕ ಸಂಕಟ’ ಉಂಟು ಮಾಡಿದ ರೆಸ್ಟೋರೆಂಟ್‌ಗೆ 35 ಸಾವಿರ ರೂ. ದಂಡ ವಿಧಿಸಲಾಗಿದೆ.
ತಮಿಳುನಾಡಿನ ವಿಲ್ಲುಪುರಂನಲ್ಲಿರುವ ಗ್ರಾಹಕ ನ್ಯಾಯಾಲಯವು 2000 ರೂಪಾಯಿ ಮೌಲ್ಯದ ಆಹಾರ ಪೂರೈಕೆಗೆ ಭರವಸೆ ನೀಡಿ ಉಪ್ಪಿನಕಾಯಿ ತಲುಪಿಸದಿದ್ದಕ್ಕಾಗಿ ಪರಿಹಾರ ಮತ್ತು ದಾವೆ ವೆಚ್ಚವಾಗಿ ಗ್ರಾಹಕರಿಗೆ 35,000 ರೂಪಾಯಿಗಳನ್ನು ಪಾವತಿಸಲು ರೆಸ್ಟೋರೆಂಟ್ ಮಾಲೀಕರಿಗೆ ಆದೇಶಿಸಿದೆ.
ತನ್ನ ಸಂಬಂಧಿಕರ ವಾರ್ಷಿಕ ಪುಣ್ಯತಿಥಿ 25 ಜನರಿಗೆ ಊಟಕ್ಕಾಗಿ ಸಿ. ಆರೋಗ್ಯಸಾಮಿ ಆರ್ಡರ್ ಮಾಡಿದ್ದರು. ಆದರೆ, ಉಪ್ಪಿನಕಾಯಿ ಕೊಟ್ಟಿರಲಿಲ್ಲ. ಈ ಬಗ್ಗೆ ತಿಳಿಸಿದಾಗ ರೆಸ್ಟೊರೆಂಟ್ ನವರು ಉಪ್ಪಿನಕಾಯಿ ಕಳಿಸಿದ್ದರು. ಆದರೆ, ಅದು ಬರುವಷ್ಟರಲ್ಲಿ ಅತಿಥಿಗಳು ಊಟ ಮುಗಿಸಿದ್ದರು.
ರೆಸ್ಟೋರೆಂಟ್ ನ ಈ ಕ್ರಮ ಸೇವೆಯಲ್ಲಿನ ಕೊರತೆಗೆ ಸಮಾನವಾಗಿದೆ. ಇದು ಗ್ರಾಹಕರಿಗೆ ದೈಹಿಕ ತೊಂದರೆ ಮತ್ತು ಮಾನಸಿಕ ಸಂಕಟವನ್ನು ಉಂಟುಮಾಡುತ್ತದೆ. ನೊಂದ ಗ್ರಾಹಕರು ಖರೀದಿಸಿದ 25 ಊಟಗಳಿಗೆ ರೆಸ್ಟೋರೆಂಟ್ ರಸೀದಿಯನ್ನು ನೀಡಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.
ನ್ಯಾಯಾಲಯವು ರೆಸ್ಟೋರೆಂಟ್‌ಗೆ 5000 ರೂಪಾಯಿಗಳ ದಾವೆ ವೆಚ್ಚದ ಜೊತೆಗೆ 30,000 ರೂಪಾಯಿ ದಂಡವನ್ನು ವಿಧಿಸಿತು. ನವೆಂಬರ್ 2022 ರಲ್ಲಿ ಸಿ. ಆರೋಗ್ಯಸಾಮಿ ಅವರು ಹೋಟೆಲ್ ಬಾಲಮುರುಗನ್ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.