
ದೇಶದಲ್ಲಿ ಕೊರೊನಾ ವೈರಸ್ ಭಯ ಹೆಚ್ಚಾದಂತೆಲ್ಲ ಜನತೆ ಹೋಟೆಲ್, ರೆಸ್ಟೋರೆಂಟ್ಗಳಿಗೆ ಭೇಟಿ ನೀಡುವ ಬದಲು ಆನ್ಲೈನ್ ಅಪ್ಲಿಕೇಶನ್ಗಳ ಸಹಾಯದಿಂದ ಮನೆಗೆ ಆಹಾರಗಳನ್ನು ಆರ್ಡರ್ ಮಾಡಿ ಸವಿಯುತ್ತಿದ್ದಾರೆ. ಹೀಗಾಗಿ ಡೆಲಿವರಿ ಎಕ್ಸಿಕ್ಯೂಟಿವ್ಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಡೆಲಿವರಿ ಎಕ್ಸಿಕ್ಯೂಟಿವ್ಗಳು ಹಗಲಿರುಳೆನ್ನದೇ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಆಹಾರವನ್ನು ತಲುಪಿಸಲು ಹರಸಾಹಸ ಪಡ್ತಿದ್ದಾರೆ.
ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಗರಿಷ್ಠ ಮಟ್ಟಕ್ಕೇರಿದ ಕಚ್ಚಾ ತೈಲ ದರ – ಇನ್ನೂ ದುಬಾರಿಯಾಗಲಿದೆ ಗಗನಕ್ಕೇರಿರುವ ಪೆಟ್ರೋಲ್ ಬೆಲೆ
ಆದರೆ ಈ ನಡುವೆಯೇ ಸಾಕಷ್ಟು ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ಗಳನ್ನು ಕೀಳಾಗಿ ಕಾಣುತ್ತಿರುವ ಸಾಕಷ್ಟು ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರ್ತಿದೆ.
ವಾರದ ಹಿಂದಷ್ಟೇ ಉದಯಪುರದ ಮಾಲ್ನಲ್ಲಿರುವ ಫುಡ್ ಕೋರ್ಟ್ನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ಗಳಿಗೆ ಲಿಫ್ಟ್ ಬಳಕೆ ಮಾಡದಂತೆ ನೋಟಿಸ್ ಅಂಟಿಸಿತ್ತು. ಇದೀಗ ಇನ್ನೊಂದು ರೆಸ್ಟೋರೆಂಟ್ ಡೆಲಿವರಿ ಬಾಯ್ಸ್ ಶೌಚಾಲಯ ಬಳಕೆ ಮಾಡುವಂತಿಲ್ಲ ಎಂದು ಹೇಳುವ ಮೂಲಕ ಸೋಶಿಯಲ್ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.
SBI ಗ್ರಾಹಕರಿಗೆ ಮುಖ್ಯ ಮಾಹಿತಿ: ಅ 1 ರಿಂದ ಕಾರ್ಡ್ ದಾರರಿಗೆ ಇ –ಮ್ಯಾಂಡೇಟ್ ಮಾರ್ಗದರ್ಶಿ ಅನ್ವಯ
ರೆಡಿಟ್ ಬಳಕೆದಾರರೊಬ್ಬರು ಈ ಫೋಟೊವನ್ನು ಶೇರ್ ಮಾಡಿದ್ದಾರೆ. ಕಾರ್ನರ್ ಹೌಸ್ ಐಸ್ಕ್ರೀಂ ಎಂಬ ರೆಸ್ಟೋರೆಂಟ್ ಒಂದರಲ್ಲಿ ಸ್ವಿಗ್ಗಿ ಹಾಗೂ ಜೊಮ್ಯಾಟೋ ಡೆಲಿವರಿ ಬಾಯ್ಸ್ ರೆಸ್ಟೋರೆಂಟ್ನ ಶೌಚಾಲಯ ಬಳಕೆ ಮಾಡುವಂತಿಲ್ಲ ಎಂದು ನೋಟಿಸ್ ಅಂಟಿಸಿತ್ತು. ಆದರೆ ಈ ರೆಸ್ಟೋರೆಂಟ್ನ ಸ್ಥಳದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಫೋಟೋ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಟೀಕೆಗಳನ್ನು ಎದುರಿಸಿದೆ.