
ಜಪಾನ್ ರಾಜಕುಮಾರಿ ಮಾಕೊ ಅಕಿಶಿನೋ, ರಾಜವಂಶ ತೊರೆದು, ಜನಸಾಮಾನ್ಯನೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾರೆ.
ತನ್ನ ಪ್ರೇಮಿಗಾಗಿ ಆಕೆ, 7 ಬಾರಿ ಮದುವೆ ಮುರಿದುಕೊಂಡಿದ್ದರು.
29 ವರ್ಷದ ರಾಜಕುಮಾರಿ ಮಾಕೊ, ಜಪಾನ್ನ ಪ್ರಸ್ತುತ ರಾಜ ನರುಹಿಟೊ ಸಹೋದರ ರಾಜಕುಮಾರ ಅಕಿಶಿನೋ ಅವರ ಮಗಳು. ಮಾಕೊ, ಪ್ರೇಮಿ ಕೊಮುರೊರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆಯ ನಂತರ ಅಮೆರಿಕದಲ್ಲಿ ನೆಲೆಸಲು ತಯಾರಿ ನಡೆಸುತ್ತಿದ್ದಾರೆ. ಮದುವೆ ದಿನಾಂಕ ಇನ್ನೂ ನಿಗಧಿಯಾಗಿಲ್ಲ. ರಾಜಮನೆತನದವರು ಕೂಡ ಮದುವೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮಾಕೊ ಪ್ರೇಮಿ, ಅಮೆರಿಕದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ. ಸ್ಕೀಯಿಂಗ್, ಪಿಟೀಲು ನುಡಿಸುವುದು ಮತ್ತು ಅಡುಗೆ ಮಾಡುವುದು ಇಷ್ಟದ ಕೆಲಸವಂತೆ. ಕಡಲತೀರಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಿನ್ಸ್ ಆಫ್ ದಿ ಸೀ ಆಗಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ. 2013ರಲ್ಲಿ ಮೊದಲ ಬಾರಿ ಕೊಮುರೊ ಪ್ರೇಮ ನಿವೇದನೆ ಮಾಡಿದ್ದರಂತೆ. ನಂತ್ರ ರಾಜಕುಮಾರಿ ಓದಲು ಬ್ರಿಟನ್ ಗೆ ತೆರಳಿದ್ದರಂತೆ. ನಮ್ಮಿಬ್ಬರನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲವೆಂದು ಮಾಕೊ ಹೇಳಿದ್ದಾರೆ.
2017ರಲ್ಲಿಯೇ ಮದುವೆ ನಿಗದಿಯಾಗಿತ್ತು. ಅದನ್ನು 2018ಕ್ಕೆ ಮುಂದೂಡಲಾಗಿತ್ತು. ನಂತ್ರ 2020ಕ್ಕೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಮತ್ತೆ ಮದುವೆ ಮುಂದೂಡಲಾಗಿದೆ. ಪ್ರೇಮಿಗಾಗಿ ಮಾಕೊ, 7 ಬಾರಿ ಮದುವೆ ಮುಂದೂಡಿದ್ದಾಳೆ.