ಭಾರತದಿಂದ ಕೆನಡಾಕ್ಕೆ ಹೋಗುವವರಿಗೊಂದು ಬ್ಯಾಡ್ ನ್ಯೂಸ್ ಇದೆ. ಇನ್ನೂ ಸ್ವಲ್ಪ ದಿನ ಕೆನಡಾ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗ್ತಿರುವ ಕಾರಣ, ಕೆನಡಾ ಸರ್ಕಾರ, ಭಾರತದ ಪ್ರಯಾಣಿಕರ ವಿಮಾನದ ಮೇಲಿನ ನಿಷೇಧವನ್ನು ಮುಂದುವರೆಸಿದೆ. ಸೆಪ್ಟೆಂಬರ್ 21ರವರೆಗೆ ಕೆನಡಾಕ್ಕೆ ಯಾವುದೇ ವಿಮಾನ ಹಾರಾಟ ನಡೆಸುವುದಿಲ್ಲ.
ಏಪ್ರಿಲ್ 22ರವರೆಗೆ ಮೊದಲು ನಿಷೇಧ ಹೇರಲಾಗಿತ್ತು. ನಂತ್ರ ಅನೇಕ ಬಾರಿ ಇದನ್ನು ವಿಸ್ತರಿಸಲಾಗಿದೆ. ಈ ನಿಷೇಧವು ಸರಕು ವಿಮಾನಗಳು ಅಥವಾ ವೈದ್ಯಕೀಯ ಸಲಕರಣೆಗಳ ವರ್ಗಾವಣೆಗೆ ಅನ್ವಯಿಸುವುದಿಲ್ಲ. ವಿಮಾನ ಹಾರಾಟದ ನಿಷೇಧವನ್ನು ಐದನೇ ಬಾರಿ ವಿಸ್ತರಿಸಲಾಗ್ತಿದೆ. ಕಳೆದ ತಿಂಗಳ ಆರಂಭದಲ್ಲಿ ಕೆನಡಾ ಸರ್ಕಾರ, ಸಾರ್ವಜನಿಕ ಆರೋಗ್ಯ ಸಲಹೆಯ ಮೇರೆಗೆ ನಿಷೇಧವನ್ನು ವಿಸ್ತರಿಸಿತ್ತು.
ಕೊರೊನಾ ಪರಿಸ್ಥಿತಿ ಸುಧಾರಿಸಿದಲ್ಲಿ ಸೆಪ್ಟೆಂಬರ್ 7ರಿಂದ ಗಡಿಗಳನ್ನು ತೆರೆಯುವುದಾಗಿ ಹೇಳಿದೆ. ಆದ್ರೆ ಕೆನಡಾಗೆ ಪ್ರಯಾಣ ಬೆಳೆಸುವವರು ಲಸಿಕೆ ಪಡೆಯುವುದು ಕಡ್ಡಾಯವಾಗಲಿದೆ. 14 ದಿನಗಳ ಮೊದಲು ಲಸಿಕೆ ಪ್ರಮಾಣ ಪತ್ರದ ಜೊತೆ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.