ರಾಮನಗರ: ನಿಷೇಧಾಜ್ಞೆ ಉಲ್ಲಂಘಿಸಿ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ರಾಮನಗರದ ಕಣ್ವ ಜಲಾಶಯ ಸಮೀಪದಲ್ಲಿ ನಡೆದಿದೆ.
ಹೊಸದಾಗಿ ನಿರ್ಮಾಣವಾದ ರೆಸಾರ್ಟ್ ನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸಲಾಗಿತ್ತು. ನಿಷೇಧಾಜ್ಞೆ ಇದ್ದರೂ ಕೂಡ ಪಾರ್ಟಿ ನಡೆಸಿದ್ದು, ಡಿಜೆ ಮ್ಯೂಸಿಕ್ ಸಹಿತ ಸಂಭ್ರಮಾಚರಣೆ ನಡೆಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಜನರು ಪಾರ್ಟಿಗೆ ಬಂದಿದ್ದಾರೆ, ಯುವಕರು-ಯುವತಿಯರು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ರೆಸಾರ್ಟ್ ಮಾಲೀಕ ಮತ್ತು ಸಹಾಯಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆನ್ನಲಾಗಿದೆ.