
ಕೊಡಗು: ರೆಸಾರ್ಟ್ ಮಾಜಿ ನೌಕರನೊಬ್ಬ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.
ಮ್ಯಾಗ್ನೋಲಿಯ ರೆಸಾರ್ಟ್ ಮಾಜಿ ನೌಕರ ಪ್ರವೀಣ್ ಆತ್ಮಹತ್ಯೆಗೆ ಶರಣಾದವರು. ಸಾವಿಗೂ ಮುನ್ನ ವಿಡಿಯೋ ಹೇಳಿಕೆ ನೀಡಿರುವ ಪ್ರವೀಣ್, ತನಗೆ ರೆಸಾರ್ಟ್ ಮಾಲೀಕನಿಂದ ಅನ್ಯಾಯವಾಗಿದೆ. ರೆಸಾರ್ಟ್ ಮಾಲೀಕ ಹಾಗೂ ಪೊಲೀಸರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.
ಅರಣ್ಯ ಒತ್ತುವರಿಯಾಗಿದೆ, ಲೈಸನ್ಸ್ ಇಲ್ಲಾದೇ ವಿಲ್ಲಾ ನಿರ್ಮಾಣ ಮಾಡಿದ್ದಾರೆ ಎಂದು ಪದೇ ಪದೇ ಆರೋಪ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ವಿಲ್ಲಾ ನಿರ್ಮಾಣ ಮಾಡಬಾರದಾ? ವಾಹನ ಖರೀದಿಸಬಾರದಾ? ಎಂದು ಪ್ರಶ್ನಿಸಿದ್ದಾರೆ. ರೆಸಾರ್ಟ್ ಮಾಲೀಕನ ಕಿರುಕುಳಕ್ಕೆ ನೊಂದು ಇಂದು ನನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನ ಶವ ಎತ್ತುವ ಮೊದಲು ರೆಸಾರ್ಟ್ ಮಾಲೀಕನ ಬಂಧನವಾಗಬೇಕು ಎಂದು ವಿಡಿಯೋ ರೆಕಾರ್ಡ್ ನಲ್ಲಿ ಮನವಿ ಮಾಡಿ ಸಾವಿಗೆ ಶರಣಾಗಿದ್ದಾರೆ.