ಬೆಂಗಳೂರು: ಕೇಂದ್ರ ಸರ್ಕಾರದ ಅನುದಾನ ತಾರತಮ್ಯದ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ತೀವ್ರ ವಿರೋಧದ ನಡುವೆಯೇ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರದ ವಿರುದ್ಧ ಸಂಘರ್ಷ ಮುಂದುವರೆಸಿದೆ. ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ತೆರಿಗೆ ಹಂಚಿಕೆ ಅನ್ಯಾಯ ವಿರೋಧಿಸುವ ಮತ್ತು ದೆಹಲಿಯಲ್ಲಿ ಮುಷ್ಕರ ನಿರತ ರೈತರಿಗೆ ಬೆಂಬಲ ನೀಡುವ ಕುರಿತಾಗಿ ಕಠಿಣ ಪದ ಬಳಕೆಯಲ್ಲಿನ ನಿರ್ಣಯವನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಡಿಸಿದ್ದಾರೆ.
ಕಲಾಪದ ಪಟ್ಟಿಯಲ್ಲಿ ಉಲ್ಲೇಖಿಸದೆ ಸಲಹಾ ಸಮಿತಿಯಲ್ಲಿಯೂ ಪ್ರಸ್ತಾಪಿಸಿದ ಏಕಏಕಿ ಕಾನೂನು ಸಚಿವರು ನಿರ್ಣಯ ಮಂಡಿಸಿದ್ದಾರೆ. ಇದಕ್ಕೆ ಸ್ಪೀಕರ್ ಅವಕಾಶ ನೀಡಿದ್ದಾರೆ ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ವಿಧಾನಸಭೆಯಲ್ಲಿ ಅನುದಾನ ತಾರತಮ್ಯದ ನಿರ್ಣಯ ಅಂಗೀಕಾರಗೊಂಡಿದೆ. ಏಕಾಏಕಿ ಕಳ್ಳರ ರೀತಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಾಡಿದ್ದಾರೆ. ಮುನ್ಸೂಚನೆ ನೀಡದೆ ಕಳ್ಳರ ರೀತಿ ನಿರ್ಣಯ ಅಂಗೀಕರಿಸಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.