ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದಕ್ಕೆ ಕುರಿತಂತೆ ರಾಜೀನಾಮೆ ಪರ್ವ ಮುಂದುವರೆದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ 9 ನೇ ತರಗತಿ ತಿಳಿ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ. ಮಧುಸೂದನ್ ರಾಜೀನಾಮೆ ನೀಡಿರುವ ಕುರಿತು ಪತ್ರ ಬರೆದಿದ್ದಾರೆ.
ಕುವೆಂಪು ಬಗ್ಗೆ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಿಂದ ಗೇಲಿ ಮಾಡಲಾಗಿದೆ. ಇದು ನೋವುಂಟು ಮಾಡಿದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ. ಪ್ರತಿಭಟನೆಯಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ಪಠ್ಯದಲ್ಲಿ ತಮ್ಮ ಹೆಸರು, ಪಾಠ ಸೇರಿಸಬಾರದು ಎಂದು ಅವರು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.