ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು.
ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು ಬಹಿರ್ದೆಸೆಗೆ ಅಂತ್ಯ ಹಾಡುವ ಉದ್ದೇಶ ಇನ್ನೂ ಯಾಕೋ ಸಂಪೂರ್ಣವಾಗಿ ಈಡೇರಿದಂತೆ ಕಾಣುತ್ತಿಲ್ಲ.
ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಸಿನಿಮಾದ ಟ್ರೈಲರ್ ರಿಲೀಸ್
ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಘೋಷಿಸಲಾದ ಜಾರ್ಖಂಡ್‌ನ ಘರ್ವಾ ಜಿಲ್ಲೆಯ ಚಿತ್ ವಿಶ್ರಾಮ್ ಗ್ರಾಮದಲ್ಲಿ ಜನರು ಇನ್ನೂ ಸಹ ಬಯಲನ್ನೇ ಶೌಚಾಲಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡ ಕಂಟ್ರಾಕ್ಟರ್ ಹರಿಬರಿಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಬಿಟ್ಟಿದ್ದಾನೆ. ಈ ಶೌಚಾಲಯಗಳು ಬಳಕೆಗೆ ಯೋಗ್ಯವೋ ಇಲ್ಲವೂ ಎಂದು ಪರಿಶೀಲನೆಯನ್ನೂ ಮಾಡದೇ ಶೌಚಾಲಯ ನಿರ್ಮಾಣದ ವರದಿ ಸಲ್ಲಿಸಿದ್ದಾನೆ ಕಂಟ್ರಾಕ್ಟರ್.
ವರದಿ ಪರೀಶೀಲನೆ ಮಾಡುವ ಗೋಜಿಗೆ ಹೋಗದೇ ಅದಕ್ಕೆ ಅಸ್ತು ಎಂದ ಸ್ಥಳೀಯಾಡಳಿತ ಚಿತ್ ವಿಶ್ರಾಂ ಗ್ರಾಮವನ್ನು ಬಹಿರ್ದೆಸೆ ಮುಕ್ತವೆಂದು ಘೋಷಿಸಿದೆ. ಆದರೆ ಪತ್ರಗಳಲ್ಲಿ ಸೂಚಿಸಿರುವುದಕ್ಕಿಂತ ಬೇರೆಯದ್ದೇ ಪರಿಸ್ಥಿತಿ ವಾಸ್ತವದಲ್ಲಿರುವುದನ್ನು ಮಾಧ್ಯಮಗಳು ಬೆಳಕು ಚೆಲ್ಲಿ ತೋರಿವೆ.
ಸರ್ಕಾರದ ದುಡ್ಡಿನಲ್ಲಿ ನಿರ್ಮಿಸಲಾದ ಐದು ಸಾರ್ವಜನಿಕ ಶೌಚಾಲಯಗಳು ಇದ್ದರೂ ಸಹ ಗ್ರಾಮಸ್ಥರು ಇನ್ನೂ ಬಯಲಿನಲ್ಲೇ ಶೌಚಾಲಯಕ್ಕೆ ಹೋಗುತ್ತಿದ್ದಾರೆ.