ದಾವಣಗೆರೆ: ಸಿಎಂ ವಿರುದ್ಧ ಪಂಚಮಸಾಲಿ ಶ್ರೀಗಳು ಗರಂ ಆಗಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುವುದಿಲ್ಲ ಆಗ್ರಹಿಸುತ್ತೇನೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇದುವರೆಗೂ ಶಾಂತಿಯುತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇಂದಿನಿಂದ ಮೀಸಲಾತಿ ನೀಡುವಂತೆ ಮನವಿ ಮಾಡುವುದಿಲ್ಲ. ಆಗ್ರಹ ಮಾಡುತ್ತೇವೆ. ಇಂದಿನಿಂದ ಹೋರಾಟ ಹೊಸ ಸ್ವರೂಪ ಪಡೆಯಲಿದೆ. ದಾವಣಗೆರೆಯಲ್ಲಿ ಬಾರುಕೋಲು ಚಳವಳಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರೆದಿದೆ. ದಾವಣಗೆರೆಯಿಂದ ಮುಂದುವರೆಯಲಿರುವ ಪಾದಯಾತ್ರೆಗೆ ವಚನಾನಂದ ಸ್ವಾಮೀಜಿ ಸಾಥ್ ನೀಡಲಿದ್ದಾರೆ. ಶ್ರೀಗಳ ಜೊತೆಗೆ ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೆಜ್ಜೆ ಹಾಕಲಿದ್ದಾರೆ. ದಾವಣಗೆರೆ ಚನ್ನಮ್ಮ ವೃತ್ತದಿಂದ ಬಾರುಕೋಲು ಚಳವಳಿ ನಡೆಸಲಾಗುವುದು ಎಂದು ಹೇಳಲಾಗಿದೆ.