ತಂತ್ರಜ್ಞಾನಗಳು ಬುದ್ಧಿಜೀವಿ ಮಾನವನಿಂದ ಏನೆಲ್ಲಾ ಆವಿಷ್ಕಾರಗಳನ್ನು ಮಾಡಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸಂಶೋಧಕರು ಹಾಳೆಯಷ್ಟು ತೆಳುವಾದ ಮತ್ತು ಅತ್ಯಂತ ಹಗುರವಾದ ಲೌಡ್ ಸ್ಪೀಕರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಇದು ನಿಮ್ಮ ಮನೆಯ ಗೋಡೆಯನ್ನೂ ಧ್ವನಿವರ್ಧಕವಾಗಿ ಪರಿವರ್ತಿಸುವಂತಿದೆ. ಸಾಮಾನ್ಯ ಧ್ವನಿವರ್ಧಕಗಳಂತೆಯೇ ಅತ್ಯುತ್ತಮ ಶಬ್ಧವನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ ಈ ಕಾಗದದಷ್ಟೇ ತೆಳುವಾಗಿರುವ ಲೌಡ್ ಸ್ಪೀಕರ್.
ಮೆಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ(ಎಂಐಟಿ)ಯ ಎಂಜಿನಿಯರ್ ಗಳು ಇಂತಹದ್ದೊಂದು ಆವಿಷ್ಕಾರ ಮಾಡಿದ್ದು, ಈ ಪೇಪರ್-ಥಿನ್ ಲೌಡ್ ಸ್ಪೀಕರ್ ಅನ್ನು ಯಾವುದೇ ಮೇಲ್ಮೈನಲ್ಲಿ ಅಳವಡಿಸಿ ಆಡಿಯೋ ಮೂಲವನ್ನು ಆನ್ ಮಾಡಿದರೆ ಸಾಕು ನಿಮಗೆ ಮುದ ನೀಡುವಂತಹ ಧ್ವನಿಯನ್ನು ಆಲಿಸಬಹುದಾಗಿದೆ.
ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್
ಅತ್ಯಂತ ತೆಳು ಮತ್ತು ತೂಕವನ್ನು ಹೊಂದಿರುವ ಈ ಸ್ಪೀಕರ್ ಅತ್ಯುತ್ಕೃಷ್ಠವಾದ ಶಬ್ಧವನ್ನು ನೀಡುತ್ತದೆ. ಇದರ ಮತ್ತೊಂದು ವಿಶೇಷವೆಂದರೆ, ಸಾಂಪ್ರದಾಯಿಕ ಲೌಡ್ ಸ್ಪೀಕರ್ ಗಳಿಗೆ ಬಳಸುವಂತಹ ವಿದ್ಯುತ್ ನ ಕೇವಲ ಒಂದು ಭಾಗವನ್ನು ಬಳಸಿದರೆ ಸಾಕು. ಹೀಗಾಗಿ ಇದು ಅತ್ಯಂತ ಉತ್ತಮ ವಿದ್ಯುತ್ ಉಳಿತಾಯ ಮಾಡಬಲ್ಲಂತಹ ಲೌಡ್ ಸ್ಪೀಕರ್ ಆಗಿದೆ.
ಈ ಬಗ್ಗೆ ನಡೆದ ಸಂಶೋಧನೆ ಬಗ್ಗೆ ಐಇಇಇ ಟ್ರಾನ್ಸಾಕ್ಷನ್ಸ್ ಆಫ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ನಲ್ಲಿ ವರದಿ ಪ್ರಕಟವಾಗಿದೆ. ಈ ಆವಿಷ್ಕಾರದ ಬಗ್ಗೆ ಮಾತನಾಡಿದ ವರದಿ ಬರೆದ ಲೇಖಕ ವ್ಲಾಡಿಮೀರ್, ಬುಲೋವಿಕ್ ಅವರು, ತೆಳುವಾದ ಹಾಳೆಯನ್ನು ಸ್ಪೀಕರ್ ಆಗಿ ಪರಿವರ್ತಿಸಬಹುದು ಎಂಬುದನ್ನು ನೋಡುವುದು ಆಶ್ಚರ್ಯವಾಗಿದೆ. ಇದಕ್ಕೆ ಕೇವಲ ಎರಡು ಕ್ಲಿಪ್ ಗಳನ್ನು ಹಾಕಬೇಕು ಮತ್ತು ಅದನ್ನು ಕಂಪ್ಯೂಟರ್ ಹೆಡ್ ಫೋನ್ ಜಾಕ್ ಗೆ ಸಂಪರ್ಕಿಸಬೇಕು ಮತ್ತು ಅದರಿಂದ ಹೊರಸೂಸುವ ಶಬ್ಧಗಳನ್ನು ಕೇಳುವುದನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.