ಟೊಕಿಯೊ: ಜಪಾನ್‌ನ ಸಂಶೋಧಕರ ತಂಡವು ಮೂತ್ರದ ಮೂಲಕ ಬ್ರೇನ್ ಟ್ಯೂಮರ್ ಕಂಡುಹಿಡಿಯುವ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.
ಅಸೋಸಿಯೇಟ್ ಪ್ರೊಫೆಸರ್ ಟಕಾವೊ ಯಾಸುಯಿ ಮತ್ತು ಜಪಾನ್ ಮೂಲದ ನಗೋಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಯೋಶಿನೋಬು ಬಾಬಾ ನೇತೃತ್ವದ ಸಂಶೋಧನಾ ಗುಂಪು ಟೋಕಿಯೊ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಿದೆ.
ಮೆದುಳಿನ ಗಡ್ಡೆಯ (ಬ್ರೇನ್ ಟ್ಯೂಮರ್) ರೋಗಿಗಳ ಮೂತ್ರದ ಮಾದರಿಗಳಲ್ಲಿ CD31 ಮತ್ತು CD63 ಎಂದು ಕರೆಯಲ್ಪಡುವ ಎರಡು ರೀತಿಯ ಎಕ್ಸ್‌ಟ್ರಾಸೆಲ್ಯುಲರ್ ವೆಸಿಕಲ್ (EV) ಮೆಂಬರೇನ್ ಪ್ರೋಟೀನ್‌ಗಳನ್ನು ಗುರುತಿಸಲು ಅವರ ಈ ಸಾಧನವನ್ನು ಬಳಸಬಹುದಾಗಿದೆ.
ಇದರ ಮೂಲಕ ರೋಗಿಯ ರೋಗಲಕ್ಷಣಗಳನ್ನು ಆರಂಭದಲ್ಲಿಯೇ ಕಂಡುಹಿಡಿದು, ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ ಎಂದು ತಂಡ ಹೇಳಿದೆ.
ವ್ಯಕ್ತಿಯ ಮೂತ್ರದಲ್ಲಿ ಟ್ಯೂಮರ್-ಸಂಬಂಧಿತ ಎಕ್ಸ್‌ಟ್ರಾಸೆಲ್ಯುಲರ್ ವೆಸಿಕಲ್ಸ್ (ಇವಿಗಳು) ಇರುವಿಕೆಯನ್ನು ಗುರುತಿಸಬಹುದಾಗಿದೆ. ಇದರ ಮೂಲಕ ಮೆದುಳಿನ ಗಡ್ಡೆಯನ್ನು ಗುರುತಿಸಬಹುದು ಎನ್ನುವುದು ಅವರ ಅಭಿಪ್ರಾಯ.