ಅಫ್ಘಾನಿಸ್ತಾನ ಬಾಲಕಿಯರ ಫುಟ್ಬಾಲ್ ತಂಡದ ಆಟಗಾರ್ತಿಯರನ್ನು ರಕ್ಷಿಸುವ ಕಾರ್ಯಾಚರಣೆಗೆ ನೆರವಾದ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್, ಅವರನ್ನೆಲ್ಲಾ ಬ್ರಿಟನ್‌ಗೆ ಕಳುಹಿಸಲು ವಿಮಾನದ ವ್ಯವಸ್ಥೆ ಮಾಡಿದ್ದಾರೆ.
ಹಾಲಿವುಡ್ ಚಿತ್ರ ಪ್ಲಾಟ್‌ನಂತೆಯೇ ನಡೆದ ಈ ನೈಜ ಕಾರ್ಯಾಚರಣೆಯಲ್ಲಿ 13-19 ವರ್ಷದ ನಡುವಿನ ಹುಡುಗಿಯರನ್ನು ಪಾಕಿಸ್ತಾನ ಮೂಲಕ ಚಾರ್ಟರ್ಡ್ ವಿಮಾನವೊಂದರಲ್ಲಿ ಬ್ರಿಟನ್‌ಗೆ ಕಳುಹಿಸಲಾಗಿದೆ. ಈ ವಿಮಾನವನ್ನು ಜೀವಿಶ್ ನೆರವಿನ ಸಂಸ್ಥೆಯೊಂದು ಚಾರ್ಟರ್ ಪಡೆದಿದ್ದು, ಕಿಮ್ ಕರ್ದಾಶಿಯನ್ ಹಣ ಹೊಂದಿಸಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಮಹಿಳೆಯದ ಹಕ್ಕುಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಈ ಮಹಿಳಾ ಫುಟ್ಬಾಲರ್‌ಗಳ ಪೈಕಿ ಬಹುತೇಕರಿಗೆ ತಾಲಿಬಾನ್‌ನಿಂದ ಕೊಲೆ ಬೆದರಿಕೆಗಳು ಬಂದಿವೆ.
ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು
ಜೀವಭಯದಿಂದ ಈ ಫುಟ್ಬಾಲರ್‌ಗಳು ಕಾಬೂಲ್‌ಗೆ ತೆರಳಿ, ಅಲ್ಲಿಂದ ಆಗಸ್ಟ್ ಅಂತ್ಯದ ವೇಳೆಗೆ ಕತಾರ್‌ಗೆ ಸುರಕ್ಷಿತವಾಗಿ ಕಳುಹಿಸಲ್ಪಡುವವರಿದ್ದರು. ಆದರೆ ಅದೇ ದಿನದಂದು ವಿಮಾನ ನಿಲ್ದಾಣಕ್ಕೆ ಸಾಗುತ್ತಿದ್ದ ಬಸ್‌ನಿಂದ ಭದ್ರತೆಯ ಕಾರಣಗಳಿಂದಾಗಿ ಇವರನ್ನೆಲ್ಲಾ ಕೆಳಗಿಳಿಸಲಾಯಿತು. ಇದಾದ ಎರಡು ಗಂಟೆಗಳ ಬಳಿಕ ವಿಮಾನ ನಿಲ್ದಾಣದ ಮೇಲೆ ಆತ್ಮಹತ್ಯಾ ಬಾಂಬರ್‌ನಿಂದ ದಾಳಿಯಾಗಿ 180ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದರು. ಮುಂದಿನ 10 ದಿನಗಳವರೆಗೂ ಹುಡುಗಿಯರು ಜೀವ ಕೈಯಲ್ಲಿ ಹಿಡಿದುಕೊಂಡು ದಿನಗಳನ್ನು ದೂಡಿದ್ದರು.
ಬಳಿಕ ತೀವ್ರವಾದ ಲಾಬಿ ಮಾಡುವ ಮೂಲಕ ಈ ಬಾಲಕಿಯರನ್ನು ಪಾಕಿಸ್ತಾನಕ್ಕೆ ಕರೆತರಲಾಯಿತು. ಆದರೆ ಬಾಲಕಿಯರ ಬಳಿ ತಾತ್ಕಾಲಿಕ ವೀಸಾಗಳು ಇದ್ದ ಕಾರಣ ಅವರ ರಕ್ಷಣೆ ಸಾಧ್ಯವಾಗಿರಲಿಲ್ಲ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಲೀಡ್ಸ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನ ಚೇರ್ಮನ್ ಆಂಡ್ರೆಯಾ ರಾಡ್ರಿಜ಼ಾನಿ, ಹುಡುಗಿಯರ ಪರಿಸ್ಥಿತಿಯನ್ನು ಬ್ರಿಟಿಷ್ ಮಿಲಿಟರಿಯ ಮಾಜಿ ಅಧಿಕಾರಿಗಳು ಹಾಗೂ ಪ್ರಭಾವೀ ಮಂದಿಯ ಮುಖಾಂತರ ಬ್ರಿಟನ್ ಸರ್ಕಾರದ ಮುಂದಿಟ್ಟಿದ್ದಾರೆ. ಇದಾದ ಬಳಿಕ ಬ್ರಿಟನ್ ಸರ್ಕಾರ ಬಾಲಕಿಯರಿಗೆ ವೀಸಾ ನೀಡಲು ಒಪ್ಪಿಗೆ ನೀಡಿದೆ.
ಮುಂದಿನ ಹಂತದಲ್ಲಿ ರಿಯಾಟಿಲಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ವೆಸ್ಟ್ ಬಾಲಕಿಯರ ರಕ್ಷಣೆಗೆ ಮುಂದೆ ಬಂದು ಅವರನ್ನು ಬ್ರಿಟನ್‌ಗೆ ಕರೆತರಲು ತಾನು ಹಣ ಹೊಂದಿಸುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನದಿಂದ ಚಾರ್ಟಡ್ ವಿಮಾನದ ಮೂಲಕ 130 ಬಾಲಕಿಯರನ್ನು ಸ್ಟಾನ್ಸೆಡ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಹುಡುಗಿಯರು ಈ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಕಳೆಯಬೇಕಿದೆ.
ಇಡಿಯ ರಕ್ಷಣಾ ಕಾರ್ಯಾರಚರಣೆಯನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡ ಮಾಜಿ ನಿರ್ವಾಹಕಿ ಖಲೀದಾ ಪೋಪಲ್ ಆಯೋಜಿಸಿದ್ದರು.