ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ.
ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ.
3300 ಕ್ಕೂ ಹೆಚ್ಚು ಬ್ಯಾಂಕ್ ಹುದ್ದೆಗಳ ನೇಮಕಾತಿ, ಕನ್ನಡದಲ್ಲಿ ನಡೆಯಲ್ಲ ಎಕ್ಸಾಮ್
“ನಾವು ಕೈಗೆತ್ತಿಕೊಂಡ ಅತ್ಯಂತ ತಾಂತ್ರಿಕವಾದ ರಕ್ಷಣಾ ಕಾರ್ಯ ಇದು. ನಮ್ಮ ರಕ್ಷಣಾ ತಾಂತ್ರಿಕ ತಂಡ, ಏರ್ ಆಪೇಷನ್ಸ್ ಕ್ರ್ಯೂ, ಮತ್ತು ನಮ್ಮ ಇತರೆ ಸಿಬ್ಬಂದಿ ಸ್ಯಾನ್ ಯುವಾನ್ ಕ್ಯಾಪಿಸ್ಟ್ರಾನೋದಲ್ಲಿ ಕಾಂಕ್ರೀಟ್ ಗುಂಡಿಯೊಂದರಲ್ಲಿ ಸಿಲುಕಿದ್ದ ಕುದುರೆಯನ್ನು ರಕ್ಷಿಸಲು ಮುಂದಾಗಿದೆ” ಎಂದು ಅಗ್ನಿಶಾಮಕ ಇಲಾಖೆ ಟ್ವಿಟರ್ನಲ್ಲಿರುವ ತನ್ನ ಅಧಿಕೃತ ಖಾತೆ ಮೂಲಕ ವಿಡಿಯೋ ಶೇರ್ ಮಾಡಿದೆ.