ಬೆಂಗಳೂರು : ಬೆಂಗಳೂರಲ್ಲಿ ನಿನ್ನೆ ಬಿಎಂಟಿಸಿ ಬಸ್ಸಿನ ಕೆಳಗೆ ನುಗ್ಗಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ನಿನ್ನೆ ಬುಧವಾರ ಬೆಳಗ್ಗೆ 10.30ರ ಸಮಯದಲ್ಲಿ ತುರಹಳ್ಳಿ ಅರಣ್ಯ ಪ್ರದೇಶದ ಚಿಕ್ಕೇಗೌಡನಹಳ್ಳಿ ಬಳಿ ಬಿಎಂಟಿಸಿ ಬಸ್ ಗೆ ಅಡ್ಡಲಾಗಿ ತಾಯಿ ಚಿರತೆ ಹಾಗೂ ಚಿರತೆ ಮರಿ ಅಡ್ಡ ಬಂದಿದೆ. ನಂತರ ತಾಯಿ ಚಿರತೆ ಸ್ಥಳದಿಂದ ಕಾಲ್ಕಿತ್ತಿದ್ದು, ಮರಿ ಚಿರತೆ ಜನರನ್ನು ನೋಡಿ ಬಸ್ ಕೆಳಗೆ ಅವಿತು ಕುಳಿತಿದೆ.
ನಂತರ ಸ್ಥಳಕ್ಕೆ ಬಂದ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್ ಡಾ ನವಾಜ್ ಷರೀಫ್ ನೇತೃತ್ವದ ಪಿಎಫ್ಎ ರಕ್ಷಣಾ ತಂಡವ ಚಿರತೆಯನ್ನು ರಕ್ಷಿಸಿದೆ. ಸದ್ಯ ಚಿರತೆಗೆ ಯಾವುದೇ ಗಾಯಗಳಾಗಿಲ್ಲ. ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.