alex Certify ರಾಜಪಥದಲ್ಲಿ ರಾಜ್ಯದ ಕರಕುಶಲ ಕಲೆ ಪ್ರದರ್ಶನ: ಗಣರಾಜ್ಯೋತ್ಸವಕ್ಕೆ ಸತತ 13 ನೇ ವರ್ಷ ಕರ್ನಾಟಕದ ಟ್ಯಾಬ್ಲೋ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಪಥದಲ್ಲಿ ರಾಜ್ಯದ ಕರಕುಶಲ ಕಲೆ ಪ್ರದರ್ಶನ: ಗಣರಾಜ್ಯೋತ್ಸವಕ್ಕೆ ಸತತ 13 ನೇ ವರ್ಷ ಕರ್ನಾಟಕದ ಟ್ಯಾಬ್ಲೋ ಆಯ್ಕೆ

ಬೆಂಗಳೂರು: ಗಣರಾಜ್ಯೋತ್ಸವದಂದು ನವದೆಹಲಿಯ ರಾಜಪಥದಲ್ಲಿ ಪ್ರದರ್ಶನಕ್ಕೆ ಕರ್ನಾಟಕದ ಟ್ಯಾಬ್ಲೋ ಆಯ್ಕೆಯಾಗಿದೆ.

ಕರ್ನಾಟಕದ ಕರಕುಶಲಕಲೆಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಇದಾಗಿದ್ದು, ಸತತ 13 ನೇ ವರ್ಷ ಕರ್ನಾಟಕದ ಟ್ಯಾಬ್ಲೋ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ.

ಚನ್ನಪಟ್ಟಣದ ಗೊಂಬೆ, ಕಿನ್ನಾಳದ ಗೊಂಬೆ, ಉಡುಪಿ ಸೀರೆ, ಇಳಕಲ್ ಸೀರೆ, ಬಿದಿರಿನ ಕಲಾಕೃತಿ, ಮೈಸೂರು ರೇಷ್ಮೆ, ಕೆತ್ತನೆಗಳು, ಕಸೂತಿ, ಪಾರಂಪರಿಕ ಚಿತ್ರಕಲೆ, ಹಿತ್ತಾಳೆ ಪಾತ್ರೆ, ಮೊಳಕಾಲ್ಮೂರು ಸೀರೆ, ಲಂಬಾಣಿ ಕಸೂತಿ, ಮೈಸೂರಿನ ರೇಷ್ಮೆ, ಬಿದಿರು ಕಲಾಕೃತಿ ಸೇರಿ 16 ಕರಕುಶಲ ವಸ್ತುಗಳನ್ನು ಅನಾವರಣಗೊಳಿಸಲಾಗುತ್ತದೆ.

ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ. ಸತತವಾಗಿ 13ನೇ ಬಾರಿಗೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗಿದ್ದು, 12 ರಾಜ್ಯಗಳ ಪೈಕಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರ ಕರ್ನಾಟಕದ್ದಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...