
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ರು (ITBP) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಂಗೀತ ನಮನದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ, ಇಬ್ಬರು ಯೋಧರು ‘ಮೇರಾ ಮುಲ್ಕ್ ಮೇರಾ ದೇಶ್’ ಎಂಬ ದೇಶಭಕ್ತಿಯ ಗೀತೆಯ ವಾದ್ಯರೂಪವನ್ನು ನುಡಿಸುತ್ತಿದ್ದಾರೆ.
ಕಾನ್ಸ್ಟೆಬಲ್ ರಾಹುಲ್ ಖೋಸ್ಲಾ ಮ್ಯಾಂಡೋಲಿನ್ ನುಡಿಸಿದರೆ, ಹೆಡ್ ಕಾನ್ಸ್ಟೇಬಲ್ ಪಾಸಾಂಗ್ ಶೆರ್ಪಾ ಕಝೂ ಮತ್ತು ಗಿಟಾರ್ ಎರಡನ್ನು ನುಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಇವರಿಬ್ಬರ ಸಂಗೀತಜ್ಞಾನಕ್ಕೆ ಸಲ್ಯೂಟ್ ಹೊಡೆದಿದ್ದಾರೆ.