ನವದೆಹಲಿ: ದೇಶಾದ್ಯಂತ ಇಂದು 73 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಈ ಬಾರಿ ಗಣರಾಜ್ಯೋತ್ಸವದ ವಿಶೇಷತೆಗಳು ಏನೆಂದರೆ ಈ ಹಿಂದೆ ಕೆಂಪುಕೋಟೆಯಲ್ಲಿ ಪರೆಡ್ ಮುಕ್ತಾಯವಾಗುತ್ತಿತ್ತು, ಈ ಬಾರಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೆರವಣಿಗೆ ಅಂತ್ಯಗೊಳ್ಳಲಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಪರೇಡ್ ನಡೆಯಲಿದ್ದು, ಸ್ತಬ್ಧ ಚಿತ್ರಗಳು ಮಾತ್ರ ಕೆಂಪುಕೋಟೆಯವರೆಗೆ ಸಾಗಲಿದೆ.
ಬೆಳಗ್ಗೆ 10.30 ಕ್ಕೆ ಮೆರವಣಿಗೆ ಆರಂಭವಾಗಲಿದೆ. 30 ನಿಮಿಷಗಳ ವಿಳಂಬವಾಗಿ ಮೆರವಣಿಗೆ ಆರಂಭವಾಗಲಿದ್ದು ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ 8 ತುಕಡಿಗಳು ಭಾಗಿಯಾಗಲಿದೆ. ವಾಯುಪಡೆ, ನೌಕಾಪಡೆ ಹಾಗೂ 6 ಭೂಸೇನಾ ತುಕಡಿಗಳು ಭಾಗಿಯಾಗಿದ್ದು, ಹಳೆಯ ಮತ್ತು ಹೊಸ ಯುದ್ಧ ಟ್ಯಾಂಕರ್ ವೈಶಿಷ್ಟ್ಯ ಇರಲಿದೆ.
1965 ಮತ್ತು 71ರ ಯುದ್ಧಗಳಲ್ಲಿ ಭಾಗವಹಿಸಿದ ಸೆಂಚುರಿಯನ್ ಟ್ಯಾಂಕರ್, ಅರ್ಜುನ್ ಯುದ್ಧ ಟ್ಯಾಂಕರ್ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ.
ಮೆರವಣಿಗೆಯಲ್ಲಿ 12 ರಾಜ್ಯಗಳ 21 ಸ್ತಬ್ಧಚಿತ್ರಗಳು ಸಾಗಲಿದ್ದು, ಎರಡು ಮೋಟಾರ್ ಸೈಕಲ್ ತಂಡಗಳು, BSF ಮಹಿಳೆಯರ ತಂಡ, ಐಟಿಬಿಪಿ ಪುರುಷರ ತಂಡ ಭಾಗಿಯಾಗಲಿವೆ. ಭಾರತೀಯ ವಾಯುಪಡೆಯ 75 ವಿಮಾನಗಳು 15 ರಚನೆಗಳಲ್ಲಿ ಪ್ಲೈಪಾಸ್ಟ್ ಮಾಡಲಿವೆ.