ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿವೆ. ಈ ನಡುವೆ ಸುದ್ದಿವಾಹಿನಿ ವರದಿಗಾರ ಮತ್ತು ಬಾಲಕನೊಬ್ಬನ ಹಾಸ್ಯಮಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಟಿವಿ ಸುದ್ದಿವಾಹಿನಿ ವರದಿಗಾರರೊಬ್ಬರು ಬಾಲಕನಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದೇನೆಂದರೆ ಎಲ್ಲರೂ ಕೂಡ ಸಾಮಾನ್ಯವಾಗಿ ಮಕ್ಕಳನ್ನು ಕೇಳುವಂತೆ, ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು. ಇಂಥ ಪ್ರಶ್ನೆ ಕೇಳಿದ್ರೆ ಮಕ್ಕಳು, ಡಾಕ್ಟರ್, ಇಂಜಿನಿಯರ್, ಪೊಲೀಸ್, ಟೀಚರ್ ಆಗುತ್ತೇನೆ ಇತ್ಯಾದಿ ಹೇಳುವುದು ಸಾಮಾನ್ಯ. ಆದ್ರೆ, ವರದಿಗಾರನ ಪ್ರಶ್ನೆಗೆ ಈ ಬಾಲಕ ನೀಡಿರುವ ಉತ್ತರ ಮಾತ್ರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.
ಅಷ್ಟಕ್ಕೂ ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂಬ ಪ್ರಶ್ನೆಗೆ ಬಾಲಕ ಏನು ಉತ್ತರಿಸಿದ್ದಾನೆ ಎಂದು ಕೇಳಿದ್ರೆ, ಖಂಡಿತಾ ನೀವು ಕೂಡ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಾ..! ಹೌದು, ಬಹಳ ಆತ್ಮವಿಶ್ವಾಸದಿಂದ ನುಡಿದ ಬಾಲಕ, ತಾನು ದೊಡ್ಡವನಾದ ಮೇಲೆ ಕೆಲಸ ಮಾಡುತ್ತೇನೆ. ಮನೆ ಕಟ್ಟಿ, ವಾಸ ಮಾಡುತ್ತೇನೆ. ತಿನ್ನುತ್ತೇನೆ, ಕುಡಿಯುತ್ತೇನೆ ಹಾಗೂ ಮದುವೆಯಾಗಿ ಹೆಂಡತಿಯ ಜೊತೆಗಿರುತ್ತೇನೆ. 2 ರಿಂದ ಮೂರು ಮಕ್ಕಳನ್ನು ಕೂಡ ಹೊಂದುವುದಾಗಿ ಹೇಳಿದ್ದಾನೆ. ಈತನ ಉತ್ತರ ಕೇಳಿದ ವರದಿಗಾರ ಸೇರಿದಂತೆ ಅಲ್ಲಿದ್ದವರೆಲ್ಲಾ ಗೊಳ್ಳನೇ ನಕ್ಕಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ಆದರೆ ಈ ವಿಡಿಯೋ ಎಲ್ಲಿಯದು ಹಾಗೂ ಯಾವಾಗಿನದ್ದು ಎಂಬ ಬಗ್ಗೆ ತಿಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ ನೆಟ್ಟಿಗರಂತೂ ಬಾಲಕನ ಉತ್ತರಕ್ಕೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
https://youtu.be/QiQXbz_h1wQ