ಪ್ರತಿನಿತ್ಯ 74 ರೂಪಾಯಿಗಳನ್ನು ಉಳಿತಾಯ ಮಾಡಿ, ಅದನ್ನು ಎನ್‌ಪಿಎಸ್‌ನಲ್ಲಿ ಇಟ್ಟರೆ ನಿಮಗೆ 40 ವರ್ಷಗಳ ಬಳಿಕ ಒಂದು ಕೋಟಿ ರೂ.ಗಳಷ್ಟು ದುಡ್ಡು ಸಿಗಲಿದೆ. ನೀವು 20ನೇ ವಯಸ್ಸಿನಿಂದಲೇ ಇದಕ್ಕಾಗಿ ಉಳಿತಾಯ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಜನರು ಕೆಲಸ ಮಾಡದೇ ಇದ್ದರೂ, ಪ್ರತಿನಿತ್ಯ 74ರೂ.ಗಳ ಉಳಿತಾಯ ದೊಡ್ಡ ವಿಚಾರವೇನಲ್ಲ.
ಎನ್‌ಪಿಎಸ್‌ನಲ್ಲಿರುವ ದುಡ್ಡನ್ನು ಈಕ್ವಿಟಿ ಮಾರುಕಟ್ಟೆ ಹಾಗೂ ಸರ್ಕಾರದ ಬಾಂಡ್‌ಗಳು ಮತ್ತು ಕಾರ್ಪೋರೇಟ್ ಬಾಂಡ್‌ಗಳ ಮೇಲೆ ಹೂಡುವ ಕಾರಣ ಇಲ್ಲಿ ಪಿಪಿಎಫ್ ಅಥವಾ ಇಪಿಎಫ್‌ಗಿಂತ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ.
ಬಾಲ್ಯದಲ್ಲಿಯೇ ಮಕ್ಕಳಿಗೆ ಈ ಸಂಗತಿ ಕಲಿಸುವ ಮೂಲಕ ಭವಿಷ್ಯ ರೂಪಿಸಿ
ಪ್ರತಿನಿತ್ಯ 74 ರೂ.ಗಳಂತೆ ತಿಂಗಳು ತಿಂಗಳು 2,230 ರೂ.ಗಳನ್ನು ಹೂಡುತ್ತಾ ಸಾಗಿದಲ್ಲಿ, 9% ವಾರ್ಷಿಕ ರಿಟರ್ನ್ಸ್ ಲೆಕ್ಕಾಚಾರದಲ್ಲಿ 40 ವರ್ಷಗಳ ಬಳಿಕ ನಿಮ್ಮ ಬಳಿ 1.03 ಕೋಟಿ ರೂಪಾಯಿಗಳು ಜಮೆ ಆಗಲಿವೆ. ಇದರಲ್ಲಿ ನಿಮ್ಮ ಹೂಡಿಕೆ 10.7 ಲಕ್ಷ ರೂಪಾಯಿಗಳಾದರೆ, ಅದರ ಮೇಲೆ ಸಿಗುವ ಬಡ್ಡಿಯೇ 92.40 ಲಕ್ಷ ರೂಪಾಯಿಗಳಷ್ಟಾಗಲಿದೆ.
ಇದರಲ್ಲಿ ನೀವು ಒಮ್ಮೆಗೆ 60%ನಷ್ಟು ದುಡ್ಡನ್ನು ಮಾತ್ರವೇ ಹಿಂಪಡೆಯಬಹುದಾಗಿದ್ದು, ಮಿಕ್ಕ 40% ಮೊತ್ತವನ್ನು ಪಿಂಚಣಿಯ ರೂಪದಲ್ಲಿ ಪಡೆಯಬಹುದಾಗಿದೆ. ಇದರರ್ಥ, ನೀವು ನಿವೃತ್ತ ಜೀವನ ನಡೆಸಲು ಪ್ರತಿ ತಿಂಗಳು 27,500 ರೂ.ಗಳನ್ನು ಪಡೆಯಬಹುದಾಗಿದೆ.