ʼಪಮಾಮ ಪೇಪರ್ಸ್ʼ ವಿಚಾರಣೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈ ಮೊದಲ ಪೋಸ್ಟ್ 23-12-2021 12:51PM IST / No Comments / Posted In: Featured News, Live News, Entertainment ಸದ್ಯ ಪನಾಮಾ ಪೇಪರ್ಸ್ ಹಗರಣ ಸಂಬಂಧ ಇಡಿ ವಿಚಾರಣೆಯನ್ನು ಎದುರಿಸುತ್ತಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಪೋಷಕರ ವಾರ್ಷಿಕೋತ್ಸವದ ನಿಮಿತ್ತ ಇನ್ಸ್ಟಾಗ್ರಾಂನಲ್ಲಿ ತಂದೆ – ತಾಯಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ಪನಾಮ ಪೇಪರ್ಸ್ ವಿವಾದದಲ್ಲಿ ಇಡಿ ವಿಚಾರಣೆಗೆ ಹಾಜರಾದ ಬಳಿಕ ಮಾಡಿದ ಸೋಶಿಯಲ್ ಮೀಡಿಯಾದ ಮೊದಲ ಪೋಸ್ಟ್ ಇದಾಗಿದೆ. ನನ್ನ ಪ್ರೀತಿಪಾತ್ರರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಮೋಮಿಮ ದೊಡ್ಡ – ಡ್ಯಾಡಿ ಅಜ್ಜಾ ನಿಮ್ಮನ್ನು ನಾನು ಅತಿಯಾಗಿ ಪ್ರೀತಿಸುತ್ತೇನೆ. ನಿಮ್ಮೆಲ್ಲ ಪ್ರೀತಿ ಹಾಗೂ ಆಶೀರ್ವಾದಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಈ ನಡುವೆ ಪನಾಮ ಪೇಪರ್ಸ್ ಎಂದು ಕರೆಯಲ್ಪಡುವ 2016ರಲ್ಲಿ ವಿಶ್ವಾದ್ಯಂತ ನಡೆದ ತೆರಿಗೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ರೈ ಸೋಮವಾರ ದೆಹಲಿಯಲ್ಲಿ ಇಡಿ ಕಚೇರಿಗೆ ಹಾಜರಾಗಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ಗೆ ಇಡಿ ಪ್ರಶ್ನೆ ಮಾಡಿದೆ.