ಕರೆಯದೆ ಬರುವ ಅತಿಥಿಯಂತೆ ತಲೆ ನೋವು ಆಗಾಗ ಬಂದು ತಲೆ ಕೆಡಿಸುತ್ತಿರುತ್ತದೆ. ಪ್ರತಿಬಾರಿ ಇದಕ್ಕೆ ಮಾತ್ರೆ ತೆಗೆದುಕೊಳ್ಳುವ ಬದಲು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ನೋಡಿ.
ಮೊಬೈಲ್, ಟಿವಿ, ಕಂಪ್ಯೂಟರ್ ನಿಂದ ದೂರ ಕುಳಿತು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ ಅಥವಾ ಇತರರಿಂದ ಮಾಡಿಸಿಕೊಳ್ಳಿ. ಹಣೆಯ ಭಾಗದಲ್ಲಿ ತಲೆನೋವು ಹೆಚ್ಚಿದ್ದರೆ ತೋರು ಬೆರಳುಗಳ ಸಹಾಯದಿಂದ ಮೂಗಿನ ತನಕ ಮಸಾಜ್ ಮಾಡುತ್ತಾ ಬನ್ನಿ. ಇದರಿಂದ ನರನಾಡಿಗಳು ಸ್ವಲ್ಪಮಟ್ಟಿಗೆ ಶಾಂತವಾಗುತ್ತವೆ.
ದೇಹದಲ್ಲಿ ಉಷ್ಣಾಂಶ ವಿಪರೀತ ಹೆಚ್ಚಿದಾಗ, ಪಿತ್ತದ ಪ್ರಭಾವದಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಜ್ಜಿಗೆ ಅಥವಾ ಎಳನೀರು ಕುಡಿಯಿರಿ. ತಲೆಗೆ ಎಳ್ಳೆಣ್ಣೆ ಇಲ್ಲವೇ ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಊಟದೊಂದಿಗೆ ತುಪ್ಪ ಬೆರೆಸಿ.
ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದು ತಲೆನೋವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಜೀರ್ಣದಿಂದ ಬಂದಿದ್ದ ತಲೆನೋವನ್ನು ದೂರಮಾಡುತ್ತದೆ.