ಭೋಪಾಲ್: ಮಧ್ಯಪ್ರದೇಶದ ಜಹಾಂಗೀರಾಬಾದ್ ನಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
ತಂದೆಯ ಲೈಂಗಿಕ ಕಿರುಕುಳದಿಂದ ನೊಂದು ಹೋದ ಬಾಲಕಿ ತನ್ನ ತಾಯಿಯ ಬಳಿ ವಿಷಯ ತಿಳಿಸಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆರೋಪಿತನಿಗೆ ಆತನ ಪತ್ನಿ ಪ್ರಶ್ನಿಸಿದಾಗ ಪುತ್ರಿ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ತಾಯಿ ಇಲ್ಲದ ವೇಳೆಯಲ್ಲಿ ಆರೋಪಿ ಪುತ್ರಿಯನ್ನು ಬೆದರಿಸಿ ಇಂತಹ ಕೃತ್ಯವೆಸಗಿದ್ದಾನೆ. ಒಂದು ವರ್ಷದಿಂದ ತನ್ನ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ತಂದೆ ಇಂತಹ ಕೃತ್ಯವೆಸಗಿದ್ದಾಗಿ ಬಾಲಕಿ ಹೇಳಿದ್ದಾಳೆ.
ಫೆಬ್ರವರಿ 28 ರಂದು ಬಾಲಕಿ ಅಜ್ಜನ ಮನೆಗೆ ಹೋದಾಗ ಆಕೆಯನ್ನು ಹಿಂಬಾಲಿಸಿ ಬಂದ ತಂದೆ ಪುನಃ ಅತ್ಯಾಚಾರ ಎಸಗಿದ್ದಾನೆ. ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಸೇರಿದಂತೆ ವಿವಿಧ ಕಾಯ್ದೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಜಹಾಂಗೀರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.