alex Certify ಪದೇ ಪದೇ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ ಹುಷಾರ್..! ದೀರ್ಘಕಾಲದ ಕೋವಿಡ್ ಅಪಾಯ ಹೆಚ್ಚುವ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ ಹುಷಾರ್..! ದೀರ್ಘಕಾಲದ ಕೋವಿಡ್ ಅಪಾಯ ಹೆಚ್ಚುವ ಸಾಧ್ಯತೆ

ಪದೇ ಪದೇ ಕೋವಿಡ್ ಸೋಂಕು ತಗುಲಿದ್ದರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ದೀರ್ಘ ಕೋವಿಡ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.

ಮೊದಲಿನ ಕೋವಿಡ್ ಸೋಂಕುಗಳು ಜನರ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುತ್ತವೆ. ಭವಿಷ್ಯದ ರೂಪಾಂತರಗಳ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡುತ್ತವೆ ಎಂದು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಆದರೆ ಇದು ನಿಜವಾಗಿರುವುದಿಲ್ಲ. ಕೋವಿಡ್ -19 ಡಬ್ಲ್ಯೂಹೆಚ್ಒ ನ ವಿಶೇಷ ರಾಯಭಾರಿ ಡೇವಿಡ್ ನಬಾರೊ ಪ್ರಕಾರ, ಪುನರಾವರ್ತಿತ ಕೋವಿಡ್ ಸೋಂಕು ಜನರಲ್ಲಿ ದೀರ್ಘ ಕೋವಿಡ್ ಅಪಾಯವನ್ನು ಹೆಚ್ಚಿಸಬಹುದು. ಹಲವು ಬಾರಿ ಕೋವಿಡ್ ಸೋಂಕು ತಗುಲಿದ್ದರೆ, ಪ್ರತಿರೋಧ ಅಥವಾ ಪ್ರತಿರಕ್ಷೆಯನ್ನು ನಿರ್ಮಿಸುವುದಿಲ್ಲ. ಏಕೆಂದರೆ ವೈರಸ್ ಯಾವಾಗಲೂ ಬದಲಾಗುತ್ತಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹೆಚ್ಚು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದರೆ ಅಂಥವರ ಜೀವನವು ಕೋವಿಡ್‌ನೊಂದಿಗೆ ಕೊನೆಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಅದು ತುಂಬಾ ಗಂಭೀರವಾಗಿರುತ್ತದೆ ಎಂದು ನಬಾರೊ ಹೇಳಿದರು. ದೀರ್ಘ ಕಾಲದ ಕೋವಿಡ್ ಅನ್ನು ರೋಗ ಪ್ರಾರಂಭದ ನಾಲ್ಕು ವಾರಗಳ ನಂತರ ಅಥವಾ ಅದಕ್ಕಿಂತ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರಬಹುದು. ರೋಗಲಕ್ಷಣಗಳು ಸಾಮಾನ್ಯವಾಗಿ ಆಯಾಸ, ಉಸಿರಾಟದ ತೊಂದರೆ, ಏಕಾಗ್ರತೆಯ ನಷ್ಟ ಮತ್ತು ಕೀಲು ನೋವು ಸೇರಿವೆ. ರೋಗಲಕ್ಷಣಗಳು ದಿನನಿತ್ಯದ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಇನ್ನು ವಯಸ್ಸಾದವರು, ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಲಸಿಕೆ ಹಾಕದವರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...