ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿಚಾರವಾಗಿ ನಿರ್ದೇಶಕ ಓಂ ಪ್ರಕಾಶ್ ರಾವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓಂ ಪ್ರಕಾಶ್ ರಾವ್, ದರ್ಶನ್ ಗೆ ಇದು ಬೇಕಿತ್ತಾ? ಚಿತ್ರರಂಗದ ಸ್ಟಾರ್ ನಟನಾಗಿ, ಸಾಕಷ್ಟು ಜನಪ್ರಿಯತೆ, ಅಭಿಮಾನಿಗಳು ಎಲ್ಲವನ್ನೂ ಹೊಂದಿದ್ದ ದರ್ಶನ್, ರೇಣುಕಾಸ್ವಾಮಿಗೆ ಕರೆದು ಬುದ್ಧಿ ಹೇಲಬಹುದಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ಯಾವುದೋ ಸಣ್ಣ ವಿಷಯದಲ್ಲಿ ಕೊಲೆ ಆರೋಪ ಹೊತ್ತು ಇಂದು ಜೈಲು ಸೇರಿರುವುದು ಬೇಸರವಾಗಿದೆ. ಈ ರೀತಿ ಮಾಡಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ ಎಂದರೆ ಚಿತ್ರರಂಗದ ಎಲ್ಲರಿಗೂ, ಅಭಿಮಾನಿಗಳಿಗೂ ಎಲ್ಲರಿಗೂ ದು:ಖ ಆಗಿದೆ. ರೇಣುಕಾಸ್ವಾಮಿ ಮೀಸೇಜ್ ಕಳುಹಿಸಿದ್ದರೆ ಕರೆದು ತಿದ್ದಿ ಬುದ್ದಿ ಹೇಳಬಹುದಿತ್ತು. ಇಂತಹ ಸಾವಿರಾರು ಪ್ರಕರಣಗಳು ಇರುತ್ತವೆ ಅದಕ್ಕೆ ಈ ಮತ್ಟಕ್ಕೆ ಹೋಗಿದ್ದು ಸರಿಯಲ್ಲ. ಓರ್ವ ಜವಾಬ್ದಾರಿಯುತ ನಟನಾಗಿ ಯೋಚಿಸಬಹುದಿತ್ತು ಎಂದು ಹೇಳಿದ್ದಾರೆ.
ಈಗ ರೇಣುಕಾಸ್ವಾಮಿ ಹತ್ಯೆಯಾಗಿದೆ. ತಪ್ಪ್ಪು ಯಾರೇ ಮಾಡಿದರೂ ತಪ್ಪೇ. ಶಿಕ್ಷೆಯಾಗಬೇಕು. ಕಾನೂನು ಕ್ರಮ ಕೈಗೊಳ್ಳುತ್ತದೆ. ಆದರೆ ಏನೇ ಆದರೂ ರೇಣುಕಾಸ್ವಾಮಿಯ ಗರ್ಭಿಣಿ ಪತ್ನಿಗೆ ಮತ್ತೆ ಪತಿ ಸಿಗುತ್ತಾನ? ರೇಣುಕಾಸ್ವಾಮಿ ಕಳೆದುಕೊಂಡ ತಂದೆ-ತಾಯಿಗೆ ಮಗ ಸಿಗುತ್ತಾನಾ. ಹುಟ್ಟುವ ಮಗುವಿನ ಭವಿಷ್ಯವೇನು? ಕುಟುಂಬದ ಕಥೆ ಏನಾಗಬೇಕು? ಯಾವುದೂ ವಾಪಾಸ್ ಬರಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅಬರೀಶ್ ಅಣ್ಣ ಇದ್ದಿದ್ರೆ ದರ್ಶನ್ ನನ್ನು ಕರೆದು ಕಪಾಳಕ್ಕೆ ಹೊಡೆಯುತ್ತಿದ್ದರು. ಈರೀತಿ ಮಾಡಿದ್ದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದರು. ಸುಮಲತಾ ಅವರು ಕೂಡ ದರ್ಶನ್ ಬಗ್ಗೆ ನೊಂದಿರುತ್ತಾರೆ. ಒಳ್ಳೆರೀತಿಯಿಂದ ಹೋಗಲಿ ಎಂದೇ ಅವರು ಭಯಸುತ್ತಾರೆ. ಮಗ ಎಂದು ಹೇಳಿಕೊಂಡವರು ಈ ಘಟನೆಂದ ನೊಂದಿರದೇ ಇರಲಾರರು. ಆದರೆ ಅಂಬರಿಶ್ ಇದ್ದಿದ್ರೆ ಕಪಾಳಕ್ಕೆ ಹೊಡೆದು ದರ್ಶನ್ ಗೆ ಬೈಯ್ಯುತ್ತಿದ್ದರು ಎಂದು ಹೇಳಿದ್ದಾರೆ.