
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಟ ದರ್ಶನ್ ಸೇರಿದಂತೆ 14 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಇಂದಿನಿಂದ ಕೇಸ್ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ.
ತನಿಖಾಧಿಕಾರಿ ಗಿರೀಶ್ ನಾಯ್ಕ್ ಬದಲಾಗಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ಅವರನ್ನು ನೇಮಕ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ಕಾಮಾಕ್ಷಿ ಪಾಳ್ಯ ಠಾಣೆಗೆ ನೇಮಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ನೇತೃತ್ವದಲ್ಲಿ ಈವರೆಗೆ ರೇಣುಕಾಸ್ವಮೈ ಹತ್ಯೆ ಪ್ರಕರಣದ ತನಿಖೆ ನಡೆದಿತ್ತು.
ಆದರೆ ಈಗ ಚುನಾವಣಾ ಕರ್ತವ್ಯ ಮುಗಿದ ಹಿನ್ನೆಲೆಯಲ್ಲಿ ಗಿರೀಸ್ ನಾಯ್ಕ್ ವರ್ಗಾವಣೆಯಾಗಿದ್ದು, ಎಸಿಪಿ ಚಂದನ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.