
ಬೆಂಗಳೂರು: ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಅಂಶಗಳು ಹೊರಬರುತ್ತಿವೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆಗೈದು ಶವ ಎಸೆದಿದ್ದ ಡಿ ಗ್ಯಾಂಗ್, ಆತಮನ ಮೈಮೇಲೆ ಇದ್ದ ಚಿನ್ನಾಭರಣ, ವಾಚ್ ಗಳನ್ನು ದೋಚಿದ್ದರು.
ರೇಣುಕಾಸ್ವಾಮಿಯ ಶವದ ಮೇಲಿದ್ದ ಚಿನ್ನದ ಚೈನ್, ಉಂಗುರ, ಬೆಳ್ಳಿ ಕಡಗ, ವಾಚ್ ಗಳನ್ನು ಬಿಡದ ಆರೋಪಿ ರಾಘವೇಂದ್ರ, ಚಿನ್ನಾಭರಣಗಳನ್ನು ಕಿತ್ತುಕೊಂಡು ತನ್ನ ಪತ್ನಿಗೆ ಕೊಟ್ಟಿದ್ದ.
ಇದೀಗ ಆರೋಪಿ ರಾಘವೇಂದ್ರ ಪತ್ನಿ ಬಳಿ ಇದ್ದ ರೇಣುಕಾಸ್ವಾಮಿಯ ಚಿನ್ನದ ಸರ, ಉಂಗುರ, ವಾಚ್, ಬೆಳ್ಳಿ ಕಡಗವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.