ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಒಟ್ಟು ಆರು ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಲಾಗಿದೆ.
ಖಾಕಿ ಕೈ ಸೇರಿದ 6 FSL ರಿಪೋರ್ಟ್:
ಪಟ್ಟಣಗೆರೆ ಶೆಡ್ ನ ಸಿಸಿಟಿವಿ ಕ್ಯಾಮರಾಗಳ ಪುಟೇಜ್
ಕೊಲೆ ನಡೆದ ಸ್ಥಳದಲ್ಲಿನ ಫಿಂಗರ್ ಪ್ರಿಂಟ್ ಗಳ ವರದಿ
ರೇಣುಕಾಸ್ವಾಮಿ ಮೃತದೇಹ ಸಾಗಿಸಿದ್ದ ಸ್ಕಾರ್ಪಿಯೋದಲ್ಲಿನ ಆರೋಪಿಗಳ ಫಿಂಗರ್ ಪ್ರಿಂಟ್
ದರ್ಶನ್ ಹಾಗೂ ಪವಿತ್ರಾ ಗೌಡ ಮನೆ ಸಿಸಿಟಿವಿ ಪುಟೇಜ್
ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳು
ಕೊಲೆ ಆರೋಪಿಗಳ ಮೊಬೈಲ್ ರಿಟ್ರೀವ್ ರಿಪೋರ್ಟ್
ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ಪ್ರಕರಣದ ತನಿಖಾಧಿಕಾರಿಗಳ ಜೊತೆ ಕಮಿಷ್ನರ್ ದಯಾನಂದ ಮಹತ್ವದ ಸಭೆ ನಡೆಸಿದ್ದು, ವರದಿಯ ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಿದ್ದಾರೆ.