ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಮುಂದೆ ನಟ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಲಾಗುತ್ತಿದೆ.
ಕೊಲೆ ನಡೆದ ದಿನ ಸ್ಪೋನಿ ಬ್ರೂಕ್ ಪಬ್ ನಲ್ಲಿ ನಟ ದರ್ಶನ್ , ಪ್ರದೋಷ್ ಜೊತೆ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಪಾರ್ಟಿ ಮಾಡಿದ ಬಳಿಕ ನಟ ಚಿಕ್ಕಣ್ಣ ಸೀದಾ ಮನೆಗೆ ಹೋಗಿದ್ದರು. ಒಂದು ವೇಳೆ ಇವರುಗಳ ಜೊತೆ ಶೆಡ್ ಗೆ ಹೋಗಿದ್ದರೆ ನಟ ಚಿಕ್ಕಣ್ಣ ಕೂಡ ಜೈಲುಪಾಲಾಗುವ ಸಾಧ್ಯತೆಯಿತ್ತು. ಪಾರ್ಟಿ ಮುಗಿಸಿ ನಾನು ಸೀದಾ ಮನೆಗೆ ಹೋದೆ, ನಾನು ಶೆಡ್ ಗೆ ಹೋಗಿರಲಿಲ್ಲ ಎಂದು ನಟ ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇಂದು ಜಡ್ಜ್ ಮುಂದೆ ಕೂಡ ನಟ ಚಿಕ್ಕಣ್ಣ ಹೇಳಿಕೆ ದಾಖಲಿಸಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ಚಿಕ್ಕಣ್ಣ ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಹೇಳಿಕೆ ದಾಖಲಿಸಿದ್ದರು.