ದಾವಣಗೆರೆ: ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಛಾಟನೆಗೆ ಆಗ್ರಹಗಳು ಕೇಳಿಬಂದಿತ್ತು. ಬಿಜೆಪಿ ಕಾರ್ಯಕರರು ಹಗಊ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಯತ್ನಳ್ ಉಚ್ಛಾಟನೆಗಾಗಿ ಪ್ರತಿಭಟಯನ್ನೂ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ರೇಣುಕಾಚಾರ್ಯ ಉಚ್ಛಾಟನೆಗೂ ಬಿಜೆಪಿಯಲ್ಲಿ ಕೂಗು ಜೋರಾಗಿದೆ.
ಸಿದ್ದೇಶ್ವರ್ ತಣ್ಡದ ಮುಖಂಡರು ಹಾಗೂ ಬೆಂಬಲಿಗರು ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಪಕ್ಷದಿದ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ. ಯತ್ನಾಳ್ ಉಚ್ಛಾಟನೆ ಮಾಡುವುದಾದರೆ, ರೇಣುಕಾಚಾರ್ಯ ಅವರನ್ನು ಉಚ್ಛಾತನೆ ಮಾದಬೇಕು ಎಂದಿದ್ದಾರೆ.
ರೇನುಕಾಚಾರ್ಯ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂತೋಷ್ ಜಿ ಅವರನ್ನು ನಿಂದಿಸಿದ್ದರು. ಬಿಎಸ್ ವೈ ಮಾನಸ ಪುರ ಎಂದು ಹೇಳಿಕೊಂಡು ಅವರ ವಿರುದ್ಧವೇ ಬಂಡಾಯವೆದ್ದಿದ್ದರು. ಇಂತಹ ಜೋಕರ್ ನನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಿದ್ದೇಶ್ವರ್ ಬಣದ ನಾಯಕರು ಒತ್ತಾಯಿಸಿದ್ದಾರೆ.