
ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪನವರ ಎದುರು ಕಣ್ಣೀರು ಹಾಕಿಲ್ಲ. ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಸಚಿವ ಸ್ಥಾನಕ್ಕಾಗಿ ನಾನು ಕಣ್ಣೀರು ಹಾಕಿಲ್ಲ. ನಾನು ಜನಿಸುವಾಗ ಶಾಸಕನಾಗಿ ಜನಿಸಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ತಂದೆಯಂತೆ, ಸಿಎಂ ಬೊಮ್ಮಾಯಿ ಸಹೋದರನ ರೀತಿ. ಪಕ್ಷ, ಸಂಘಟನೆ ನನಗೆ ತಾಯಿ. ನಾನು ಆಶಾವಾದಿಯಾಗಿದ್ದೇನೆ. ನನಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನ ಇಲ್ಲ. ಇನ್ನು ಸಚಿವ ಸ್ಥಾನ ಸಿಗುವ ಆಸೆ ಇದೆ. 4 ಸ್ಥಾನಗಳು ಉಳಿದಿದ್ದು, ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸಂಪುಟ ರಚನೆ ವೇಳೆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ನನಗೆ ಸಚಿವ ಸ್ಥಾನ ತಪ್ಪಿದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ. ಅವಕಾಶ ಸಿಕ್ಕಿಲ್ಲವೆಂದು ಕುಗ್ಗಿಲ್ಲ. ರಾಜಕಾರಣದಲ್ಲಿ ಮುಜುಗರವಾಗಬಾರದು. ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಜಿಲ್ಲೆಗೊಂದು ಸಚಿವ ಸ್ಥಾನದ ಭರವಸೆ ಇದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.