ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ಭಿನ್ನರಾಗ ಶುರುವಾಗಿದೆ. ವಿರುದ್ಧ ಬಣದ ನಾಯಕರು ಯಡಿಯೂರಪ್ಪ ಸಿಎಂ ಆಗಿರೋದನ್ನ ವಿರೋಧಿಸಿ ದೆಹಲಿಗೆ ಭೇಟಿ ನೀಡುತ್ತಿರೋದ್ರ ಹಿನ್ನೆಲೆ ಭಿನ್ನಮತ ಶಮನಕ್ಕೆ ಅಖಾಡಕ್ಕೆ ಇಳಿದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ಶಾಸಕರನ್ನ ಕರೆದು ಒನ್ ಟು ಒನ್ ಮೀಟಿಂಗ್ ನಡೆಸುತ್ತಿದ್ದಾರೆ.
ವರಿಷ್ಠರ ಸೂಚನೆಯ ಮೇರೆಗೆ ಬೆಂಗಳೂರಿಗೆ ಆಗಮಿಸಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರೋಧಿ ಬಣದ ವಿರುದ್ಧ ಹರಿಹಾಯ್ದಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದವರೇ ಬಿ.ಎಸ್. ಯಡಿಯೂರಪ್ಪ. ಯಡಿಯೂರಪ್ಪ ಮಾಡಿರುವ ಒಳ್ಳೆಯ ಕೆಲಸಗಳು ಇವರಿಗೆ ಕಾಣೋದೇ ಇಲ್ವಾ..? ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರು ಸಿಎಂ ವಿರುದ್ಧ ಮಾತನಾಡುವ ಹಾಗೆ ಆಗಿದ್ದಾರೆ ಎಂದು ಕಿಡಿ ಕಾರಿದ್ರು.
ಇವರಿಗೆಲ್ಲ ದೆಹಲಿಗೆ ಹೋಗೋದು ಬಿಟ್ಟು ಬೇರೆ ಕೆಲಸ ಇಲ್ಲ ಎಂದು ಕಾಣುತ್ತೆ. ಖಾಸಗಿ ಕೆಲಸ ಎಂದು ಹೇಳಿ ದೆಹಲಿಗೆ ಹೋಗಿ ಸಿಎಂ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಇವರು ಬೆಂಗಳೂರಲ್ಲಿ ಒಂದು ಹೇಳಿಕೆ ನೀಡ್ತಾರೆ.
ದೆಹಲಿಗೆ ಹೋಗಿ ಮತ್ತೊಂದು ರೀತಿಯಲ್ಲೇ ಮಾತನಾಡುತ್ತಾರೆ. ಇವರೇನು ಯಡಿಯೂರಪ್ಪರನ್ನ ರೆಡಿ ಮೇಡ್ ಫುಡ್ ಎಂದು ಭಾವಿಸಿದ್ದಾರಾ..? ನಮ್ಮಲ್ಲಿ ಕೆಲವರಿಗೆ ಸಿಎಂ ಆಗುವ ಕನಸಿದೆ. ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜನತೆಯ ಪರ ಕೆಲಸ ಮಾಡೋದು ಬಿಟ್ಟು ರಾಜಕೀಯ ಆಟ ಆಡುತ್ತಿದ್ದಾರೆ . ಕರ್ನಾಟಕದ ಜನತೆ ಎಂದಿಗೂ ಯಡಿಯೂರಪ್ಪ ಪರವಾಗಿಯೇ ಇದ್ದಾರೆ ಎಂದು ಹೇಳಿದ್ರು.