ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್ ರಶೀದ್ ಖಾನ್ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲ್ಕತ್ತಾ ಮೂಲದ ಆಸ್ಪತ್ರೆಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಮೃತಪಟ್ಟಿದ್ದಾರೆ. 55 ವರ್ಷದ ಕಲಾವಿದ ವೆಂಟಿಲೇಟರ್ ಮೂಲಕ ಆ್ಯಕ್ಸಿಜನ್ ಪಡೆಯುತ್ತಿದ್ದರು.
ರಾಂಪುರ-ಸಹಸ್ವಾನ್ ಘರಾನಾದ 55 ವರ್ಷದ ರಶೀದ್ ಖಾನ್ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು . ನಂತರ ಅವರು ಕೋಲ್ಕತ್ತಾದಲ್ಲಿ ತಮ್ಮ ಚಿಕಿತ್ಸೆಯನ್ನು ಮುಂದುವರಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಉಸ್ತಾದ್ ರಶೀದ್ ಖಾನ್ ಮೃತಪಟ್ಟಿದ್ದಾರೆ.ಉತ್ತರ ಪ್ರದೇಶದ ಬದಾಯುನ್ನಲ್ಲಿ ಜನಿಸಿದ ರಶೀದ್ ಖಾನ್ ತಮ್ಮ ಆರಂಭಿಕ ತರಬೇತಿಯನ್ನು ತಮ್ಮ ತಾಯಿಯ ಅಜ್ಜ ಉಸ್ತಾದ್ ನಿಸಾರ್ ಹುಸೇನ್ ಖಾನ್ (1909-1993) ಅವರಿಂದ ಪಡೆದಿದ್ದರು.