![Happy Birthday Mano Murthy: Songs that highlight his prominence as a composer | Kannada Movie News - Times of India](https://static.toiimg.com/thumb/msid-80248719,width-1280,height-720,resizemode-4/80248719.jpg)
ಮನೋಮೂರ್ತಿ 1997ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೇರಿಕಾ ಅಮೇರಿಕಾ‘ ಚಿತ್ರದಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟರು. 2003 ರಲ್ಲಿ ‘ಪ್ರೀತಿ ಪ್ರೇಮ ಪ್ರಣಯ’ ಸಿನಿಮಾದಲ್ಲಿ ಕೋ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ.
2006 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ ಸಿನಿಮಾದಲ್ಲಿ ಸಂಗೀತ ಸಂಯೋಜನೆ ನೀಡಿದ್ದರು. ಈ ಚಿತ್ರದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದ್ದು, ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಮನೋಮೂರ್ತಿಯವರಿಗೆ ಸ್ಟೇಟ್ ಫಿಲಂ ಅವಾರ್ಡ್ ನಲ್ಲಿ ʼಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ʼ ಪ್ರಶಸ್ತಿ ಕೂಡ ದೊರೆತಿತ್ತು.
ಸ್ಯಾಂಡಲ್ ಸ್ಯಾಂಡಲ್ ವುಡ್ ನ ಈ ಪ್ರತಿಭಾವಂತ ಸಂಗೀತ ನಿರ್ದೇಶಕನಿಗೆ ಇಂದು ಹಿರಿಯ ಹಾಗೂ ಯುವ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.